ಯೆಶಾಯ 45:11

ಇಸ್ರಾಯೇಲಿನ ಪರಿ ಶುದ್ಧನೂ ಅದನ್ನು ರೂಪಿಸಿದವನೂ ಆಗಿರುವ ಕರ್ತನು--ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ ನನ್ನ ಕೈಕೆಲಸದ ವಿಷಯವಾ ಗಿಯೂ ನೀವು ನನಗೆ ಆಜ್ಞೆ ಮಾಡುವಿರಾ?

ಸಂದರ್ಭದೊಂದಿಗೆ ಓದಿ · ಯೆಶಾಯ 45

9ತನ್ನನ್ನು ರೂಪಿಸಿದವನ ಸಂಗಡ ವಾದ ಮಾಡುವವ ನಿಗೆ ಅಯ್ಯೋ! ಬೋಕಿಯು ಭೂಮಿಯ ಬೋಕಿಯ ಸಂಗಡವಾದ ಮಾಡಲಿ; ಮಣ್ಣು ರೂಪಿಸುವವನಿಗೆ --ನೀನು ಏನು ಮಾಡುತ್ತೀ ಎಂದೂ ನಿನ್ನ ಕೆಲಸವು --ಅವನಿಗೆ ಕೈಯಿಲ್ಲ ಅಂದೀತೇ?

10ನೀನು ಹುಟ್ಟಿಸು ವದೇನು ಎಂದು ತನ್ನ ತಂದೆಯನ್ನು ಕೇಳುವವನಿಗೆ ಇಲ್ಲವೇ ನೀನು ಹೆರುವದೇನು ಎಂದು ಹೆಂಗಸನ್ನು ಕೇಳುವವನಿಗೆ ಅಯ್ಯೋ.

11ಇಸ್ರಾಯೇಲಿನ ಪರಿ ಶುದ್ಧನೂ ಅದನ್ನು ರೂಪಿಸಿದವನೂ ಆಗಿರುವ ಕರ್ತನು--ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ ನನ್ನ ಕೈಕೆಲಸದ ವಿಷಯವಾ ಗಿಯೂ ನೀವು ನನಗೆ ಆಜ್ಞೆ ಮಾಡುವಿರಾ?

12ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನು ಷ್ಯನನ್ನು ಸೃಷ್ಟಿಸಿದೆನು; ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು ಮತ್ತು ನಾನು ಅದರ ಸೈನ್ಯಕ್ಕೆಲ್ಲಾ ಅಪ್ಪಣೆ ಕೊಟ್ಟೆನು.

13ನಾನೇ ಅವನನ್ನು ನೀತಿಯಲ್ಲಿ ಎಬ್ಬಿಸಿ ದ್ದೇನೆ; ಅವನ ಎಲ್ಲಾ ಮಾರ್ಗಗಳನ್ನು ಸರಾಗ ಮಾಡು ತ್ತೇನೆ; ಅವನು ನನ್ನ ಪಟ್ಟಣವನ್ನು ಕಟ್ಟಿ ಕ್ರಯವ ನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ನನ್ನ ಸೆರೆಯವರನ್ನು ಕಳುಹಿಸಿಬಿಡುವನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಯೆಶಾಯ 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी