ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು.
14ಅಹೀಮೆಲೆಕನು ಅರಸನಿಗೆ ಪ್ರತ್ಯುತ್ತರವಾಗಿ--ನಿನ್ನ ಎಲ್ಲಾ ಸೇವಕರಲ್ಲಿ ದಾವೀದನ ಹಾಗೆ ನಂಬಿಗಸ್ತನಾದವನು ಯಾವನಿ ದ್ದಾನೆ? ಅವನು ಅರಸನಿಗೆ ಅಳಿಯನೂ ನಿನ್ನ ಆಜ್ಞೆಗಳ ಹಾಗೆ ಮಾಡಿಕೊಂಡು ಬರುವವನೂ ನಿನ್ನ ಮನೆಯಲ್ಲಿ ಘನವುಳ್ಳವನೂ ಆಗಿದ್ದಾನೆ.
15ನಾನು ಅವನಿಗೋಸ್ಕರ ದೇವರನ್ನು ಕೇಳಲು ಪ್ರಾರಂಭಿಸಿದ್ದೆನೋ? ಅದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕನ ಮೇಲಾ ದರೂ ನನ್ನ ತಂದೆಯ ಮನೆಯವರಲ್ಲಿ ಯಾರ ಮೇಲಾ ದರೂ ಅಪರಾಧ ಹೊರಿಸಬಾರದು; ನಿನ್ನ ಸೇವಕನು ಇದರಲ್ಲಿ ಹೆಚ್ಚಾದದ್ದನ್ನಾದರೂ ಕಡಿಮೆಯಾದದ್ದನ್ನಾ ದರೂ ತಿಳಿದವನಲ್ಲ ಅಂದನು.
16ಅದಕ್ಕೆ ಅರಸನುಅಹೀಮೆಲೆಕನೇ, ನೀನೂ ನಿನ್ನ ತಂದೆಯ ಮನೆಯವ ರೆಲ್ಲರೂ ನಿಶ್ಚಯವಾಗಿ ಸಾಯಲೇಬೇಕು ಅಂದನು.
17ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.
18ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ