ನೆಹೆಮಿಯ 9:22

ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 9

20ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ.

21ಹೀಗೆಯೇ ಅರಣ್ಯದಲ್ಲಿ ನಾಲ್ವತ್ತುವರುಷ ಅವರನ್ನು ಪೋಷಿಸುತ್ತಿದ್ದಿ; ಅವರು ಕೊರತೆಪಡಲಿಲ್ಲ; ಅವರ ವಸ್ತ್ರಗಳು ಹಳೇವಾಗಲಿಲ್ಲ; ಅವರ ಕಾಲುಗಳು ಬಾತು ಹೋಗಲಿಲ್ಲ.

22ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು.

23ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿ ಅವರು ಸ್ವಾಧೀನಮಾಡಿಕೊಳ್ಳಲು ಹೋಗುವರೆಂದು ನೀನು ಅವರ ಪಿತೃಗ ಳಿಗೆ ವಾಗ್ದಾನಮಾಡಿದ ದೇಶದಲ್ಲಿ ಅವರನ್ನು ಬರಮಾಡಿದಿ;

24ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ.

ನೆಹೆಮಿಯ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी