ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
10ಉತ್ತಮ ಕಾರ್ಯ ಗಳು ಯಾವವೆಂದು ನೀವು ವಿವೇಚಿಸುವವರಾಗ ಬೇಕೆಂತಲೂ ಕ್ರಿಸ್ತನ ದಿನದವರೆಗೆ ನೀವು ಸರಳ ರಾಗಿಯೂ ನಿರ್ಮಲರಾಗಿಯೂ ಇರಬೇಕೆಂತಲೂ
11ಯೇಸು ಕ್ರಿಸ್ತನ ಮೂಲಕ ನೀತಿಯೆಂಬ ಫಲಗಳಿಂದ ತುಂಬಿದವರಾಗಿ ದೇವರಿಗೆ ಮಹಿಮೆಯನ್ನೂ ಸ್ತೋತ್ರ ವನ್ನೂ ತರುವವರಾಗಿರಬೇಕೆಂತಲೂ ಪ್ರಾರ್ಥಿಸುತ್ತೇನೆ.
12ಸಹೋದರರೇ, ನನಗೆ ಸಂಭವಿಸಿರುವದು ಸುವಾರ್ತೆಯ ಪ್ರಸಾರಣೆಗೇ ಸಹಾಯವಾಯಿತೆಂದು ನೀವು ತಿಳಿಯಬೇಕೆಂಬದಾಗಿ ನಾನು ಅಪೇಕ್ಷಿಸುತ್ತೇನೆ.
13ಹೇಗಂದರೆ ನನ್ನ ಬೇಡಿಗಳು ಕ್ರಿಸ್ತನ ನಿಮಿತ್ತವೇ ಎಂದು ಎಲ್ಲಾ ಅರಮನೆಯಲ್ಲಿಯೂ ಮಿಕ್ಕಾದ ಎಲ್ಲಾ ಸ್ಥಳಗಳಲ್ಲಿಯೂ ಪ್ರಸಿದ್ಧವಾಯಿತು.
14ಇದಲ್ಲದೆ ಕರ್ತನಲ್ಲಿ ಅನೇಕ ಸಹೋದರರು ನನ್ನ ಬೇಡಿಗ ಳಿಂದಲೇ ಭರವಸವುಳ್ಳವರಾಗಿ ವಾಕ್ಯವನ್ನು ನಿರ್ಭಯ ದಿಂದ ಹೇಳುವದಕ್ಕೆ ಇನ್ನೂ ವಿಶೇಷ ಧೈರ್ಯವನ್ನು ಹೊಂದಿದ್ದಾರೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ