ಯೆಶಾಯ 45:16

ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

ಸಂದರ್ಭದೊಂದಿಗೆ ಓದಿ · ಯೆಶಾಯ 45

14ಕರ್ತನು ಹೇಳುವದೇನಂದರೆ--ಐಗುಪ್ತದ ಆದಾ ಯವೂ ಇಥಿಯೋಪ್ಯದ ವ್ಯಾಪಾರವೂ ಎತ್ತರದ ಮನುಷ್ಯರಾದ ಸೆಬಾಯರೂ ನಿಮ್ಮಲ್ಲಿಗೆ ಸೇರಿ ನಿಮ್ಮವ ರಾಗಿ ನಿಮ್ಮನ್ನು ಅನುಸರಿಸುವರು; ಸಂಕೋಲೆಗಳನ್ನು ಕಟ್ಟಿಕೊಂಡು ಬಂದು ನಿಮ್ಮ ಮುಂದೆ ಅಡ್ಡಬಿದ್ದು ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊ ಬ್ಬನು ಇಲ್ಲ, ಬೇರೆ ದೇವರು ಇಲ್ಲವೇ ಇಲ್ಲ.

15ಓ ಇಸ್ರಾಯೇಲ್ಯರ ದೇವರೇ, ರಕ್ಷಕನೇ, ನಿಶ್ಚಯವಾ ಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.

16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.

17ಆದರೆ ಇಸ್ರಾಯೇಲ್ಯರಾದರೋ ಶಾಶ್ವತವಾದ ರಕ್ಷಣೆಯೊಂದಿಗೆ ಕರ್ತನಲ್ಲಿ ರಕ್ಷಿಸಲ್ಪ ಡುವರು; ನೀವು ಯುಗಯುಗಾಂತರಕ್ಕೂ ನಾಚಿಕೆ ಪಡುವದಿಲ್ಲ ಇಲ್ಲವೆ ಮಾನಭಂಗಪಡುವದಿಲ್ಲ.

18ಆಕಾಶಗಳನ್ನು ನಿರ್ಮಿಸಿದ ಕರ್ತನು ಇಂತೆನ್ನು ತ್ತಾನೆ--ದೇವರು ತಾನೇ ಭೂಮಿಯನ್ನು ನಿರ್ಮಿಸಿ ಅದನ್ನು ಉಂಟು ಮಾಡಿದನು. ಆತನೇ ಅದನ್ನು ಸ್ಥಾಪಿಸಿದನು; ಅದನ್ನು ವ್ಯರ್ಥವಾಗಿ ಸೃಷ್ಟಿಸದೇ ಜನ ನಿವಾಸಕ್ಕಾಗಿಯೇ ರೂಪಿಸಿದನು; ನಾನೇ ಕರ್ತನು, ಮತ್ತೊಬ್ಬನಿಲ್ಲ.

ಯೆಶಾಯ 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी