೧ ಪೂರ್ವಕಾಲವೃತ್ತಾಂತ 21:2

ಆದದರಿಂದ ದಾವೀದನು ಯೋವಾಬನ ಸಂಗಡಲೂ ಜನರ ಪ್ರಧಾನರ ಸಂಗಡಲೂ--ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ ನೀವು ಹೋಗಿ ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೆ ಇಸ್ರಾಯೇಲ್ಯರನ್ನು ಲೆಕ್ಕಿಸಿ ಅವರ ಲೆಕ್ಕವನ್ನು ನನಗೆ ತಕ್ಕೊಂಡು ಬನ್ನಿರಿ ಅಂದನು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 21

1ಸೈತಾನನು ಇಸ್ರಾಯೇಲಿಗೆ ವಿರೋಧವಾಗಿ ಎದ್ದು ಇಸ್ರಾಯೇಲ್ಯರನ್ನು ಲೆಕ್ಕಿಸಲು ದಾವೀದನನ್ನು ಪ್ರೇರೇಪಿಸಿದನು.

2ಆದದರಿಂದ ದಾವೀದನು ಯೋವಾಬನ ಸಂಗಡಲೂ ಜನರ ಪ್ರಧಾನರ ಸಂಗಡಲೂ--ನಾನು ಜನರ ಲೆಕ್ಕವನ್ನು ತಿಳಿಯುವ ಹಾಗೆ ನೀವು ಹೋಗಿ ಬೇರ್ಷೆಬವು ಮೊದಲುಗೊಂಡು ದಾನಿನ ವರೆಗೆ ಇಸ್ರಾಯೇಲ್ಯರನ್ನು ಲೆಕ್ಕಿಸಿ ಅವರ ಲೆಕ್ಕವನ್ನು ನನಗೆ ತಕ್ಕೊಂಡು ಬನ್ನಿರಿ ಅಂದನು.

3ಅದಕ್ಕೆ ಯೋವಾಬನು--ಕರ್ತನು ತನ್ನ ಜನರನ್ನು ಈಗ ಇರುವದಕ್ಕಿಂತ ನೂರರಷ್ಟಾಗಿ ಮಾಡಲಿ; ಆದರೆ ನನ್ನ ಒಡೆಯನಾದ ಅರಸನೇ, ಅವರೆಲ್ಲರು ನನ್ನ ಒಡೆಯನ ಸೇವಕರಲ್ಲವೋ? ನನ್ನ ಒಡೆಯನು ಈ ಕಾರ್ಯವನ್ನು ವಿಚಾರಿಸುವದು ಯಾಕೆ? ಅವನು ಇಸ್ರಾಯೇಲಿನಲ್ಲಿ ಅಪರಾಧಕ್ಕೆ ಕಾರಣವಾಗುವದು ಯಾಕೆ ಅಂದನು.

4ಆದರೆ ಅರಸನ ಮಾತು ಯೋವಾಬನಿಗೆ ವಿರೋಧವಾಗಿ ಜಯಗೊಂಡಿತು. ಆಗ ಯೋವಾಬನು ಹೊರಟು ಇಸ್ರಾಯೇಲಿನ ಸಮಸ್ತ ದೇಶದ ಮೇಲೆ ಹೋಗಿ ಯೆರೂಸಲೇಮಿಗೆ ತಿರಿಗಿ ಬಂದು ದಾವೀದನಿಗೆ ಜನರ ಒಟ್ಟು ಲೆಕ್ಕವನ್ನು ಕೊಟ್ಟನು.

೧ ಪೂರ್ವಕಾಲವೃತ್ತಾಂತ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी