ಯೆಹೋಶುವ 10:8

ಆದರೆ ಕರ್ತನು ಯೆಹೋಶುವನಿಗೆ--ನೀನು ಅವರಿಗೆ ಭಯಪಡಬೇಡ; ಯಾಕಂದರೆ ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ, ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವದಿಲ್ಲ ಅಂದನು.

ಸಂದರ್ಭದೊಂದಿಗೆ ಓದಿ · ಯೆಹೋಶುವ 10

6ಆಗ ಗಿಬ್ಯೋನಿನ ಜನರು--ಪರ್ವತಗಳಲ್ಲಿ ವಾಸವಾಗಿರುವ ಅಮೋರಿಯರ ಅರಸುಗಳೆಲ್ಲರೂ ನಮಗೆ ವಿರೋಧವಾಗಿ ಕೂಡಿದ್ದರಿಂದ ನಿನ್ನ ಸೇವಕರನ್ನು ಕೈಬಿಡದೆ ಶೀಘ್ರವಾಗಿ ನಮ್ಮ ಬಳಿಗೆ ಬಂದು ನಮ್ಮನ್ನು ರಕ್ಷಿಸಿ ಸಹಾಯಮಾಡು ಎಂದು ಗಿಲ್ಗಾಲಿನಲ್ಲಿ ಪಾಳೆಯ ಮಾಡಿಕೊಂಡಿದ್ದ ಯೆಹೋಶುವನ ಬಳಿಗೆ ಹೇಳಿ ಕಳುಹಿಸಿದರು.

7ಆಗ ಯೆಹೋಶುವನು ಗಿಲ್ಗಾಲನ್ನು ಬಿಟ್ಟು ತಾನೂ ತನ್ನ ಸಂಗಡ ಸಮಸ್ತಯುದ್ಧದ ಜನರೂ ಸಮಸ್ತ ಪರಾಕ್ರಮಶಾಲಿಗಳೂ ಏರಿಹೋದರು.

8ಆದರೆ ಕರ್ತನು ಯೆಹೋಶುವನಿಗೆ--ನೀನು ಅವರಿಗೆ ಭಯಪಡಬೇಡ; ಯಾಕಂದರೆ ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಕೊಟ್ಟಿದ್ದೇನೆ, ಅವರಲ್ಲಿ ಒಬ್ಬನಾದರೂ ನಿನ್ನ ಎದುರಿನಲ್ಲಿ ನಿಲ್ಲುವದಿಲ್ಲ ಅಂದನು.

9ಆದದರಿಂದ ಯೆಹೋಶುವನು ಗಿಲ್ಗಾಲಿನಿಂದ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಅವರ ಮೇಲೆ ತಕ್ಷಣವೇ ಬಂದನು.

10ಆಗ ಕರ್ತನು ಅವರನ್ನು ಇಸ್ರಾಯೇಲಿನ ಮುಂದೆ ಗಲಿಬಿಲಿಮಾಡಿ ಅವರನ್ನು ಗಿಬ್ಯೋನಿನಲ್ಲಿ ದೊಡ್ಡ ಸಂಹಾರದಿಂದ ಸಂಹರಿಸಿ ಬೇತ್‌ಹೋರೋನಿಗೆ ಹೋಗುವ ಮಾರ್ಗದಲ್ಲಿ ಹಿಂದಟ್ಟಿ ಅಜೇಕ ಮಕ್ಕೇದದ ವರೆಗೂ ಹೊಡೆದನು.

ಯೆಹೋಶುವ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी