ಆಗ ದಾಸಿಯರೂ ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.
4ಆಗ ಏಸಾವನು ಅವನನ್ನು ಎದುರುಗೊಳ್ಳುವದಕ್ಕೆ ಓಡಿ ಬಂದು ಅವನನ್ನು ಅಪ್ಪಿಕೊಂಡು ಅವನ ಕೊರಳಿನ ಮೇಲೆ ಬಿದ್ದು ಅವನಿಗೆ ಮುದ್ದಿಟ್ಟನು. ಅವರು ಅತ್ತರು.
5ಆಗ ಏಸಾವನು ತನ್ನ ಕಣ್ಣುಗಳನ್ನೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ನೋಡಿ--ನಿನ್ನ ಜೊತೆ ಯಲ್ಲಿರುವ ಇವರು ಯಾರು ಎಂದು ಕೇಳಿದನು. ಅದಕ್ಕವನು--ದೇವರು ನಿನ್ನ ದಾಸನಿಗೆ ಕೃಪೆಯಿಂದ ಕೊಟ್ಟ ಮಕ್ಕಳು ಅಂದನು.
6ಆಗ ದಾಸಿಯರೂ ಅವರ ಮಕ್ಕಳೂ ಹತ್ತಿರ ಬಂದು ಅವನಿಗೆ ಅಡ್ಡಬಿದ್ದರು.
7ಲೇಯಳು ಸಹ ತನ್ನ ಮಕ್ಕಳೊಂದಿಗೆ ಹತ್ತಿರ ಬಂದು ಅಡ್ಡಬಿದ್ದಳು. ತರುವಾಯ ಯೋಸೇಫನೂ ರಾಹೇಲಳೂ ಬಂದು ಅಡ್ಡಬಿದ್ದರು.
8ಆಗ ಏಸಾ ವನು--ನಾನು ದಾರಿಯಲ್ಲಿ ಕಂಡ ಪಶುಗಳ ಮಂದೆ ಗಳೆಲ್ಲಾ ಯಾತಕ್ಕೆ? ಅಂದಾಗ ಯಾಕೋಬನು--ನನ್ನ ಒಡೆಯನ ದೃಷ್ಟಿಯಲ್ಲಿ ನನಗೆ ಕೃಪೆ ದೊರಕಲಿ ಎಂದು ಅವುಗಳನ್ನು ತಮಗೆ ಕಳುಹಿಸಿಕೊಟ್ಟೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ