ದಾನಿಯೇಲನು 2:27

ಆಗ ದಾನಿ ಯೇಲನು ಅರಸನ ಸನ್ನಿಧಿಯಲ್ಲಿ ಪ್ರತ್ಯುತ್ತರವಾಗಿ--ಅರಸನು ನಿರ್ಭಂಧವಾಗಿ ಕೇಳುವ ರಹಸ್ಯವನ್ನು ಜ್ಞಾನಿಗಳೂ ಜೋತಿಷ್ಯರೂ ಮಂತ್ರಗಾರರೂ ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 2

25ಆಗ ಅರ್ಯೋಕನು ದಾನಿಯೇಲನನ್ನು ತ್ವರೆ ಯಾಗಿ ಅರಸನ ಮುಂದೆ ಕರೆದುಕೊಂಡು ಹೋಗಿ --ಯೆಹೂದ್ಯರ ಸೆರೆಯವರಲ್ಲಿ ನನಗೆ ಒಬ್ಬ ಮನು ಷ್ಯನು ಸಿಕ್ಕಿದ್ದಾನೆ; ಅವನು ಅರಸನಿಗೆ ಅರ್ಥವನ್ನು ತಿಳಿಸುತ್ತಾನೆ ಅಂದನು.

26ಆಗ ಅರಸನು ಬೇಲ್ತೆಶಚ್ಚರ ನೆಂಬ ದಾನಿಯೇಲನನ್ನು ಕುರಿತು--ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸುವ ಸಾಮರ್ಥ್ಯವು ನಿನಗಿದೆಯೋ ಅಂದನು.

27ಆಗ ದಾನಿ ಯೇಲನು ಅರಸನ ಸನ್ನಿಧಿಯಲ್ಲಿ ಪ್ರತ್ಯುತ್ತರವಾಗಿ--ಅರಸನು ನಿರ್ಭಂಧವಾಗಿ ಕೇಳುವ ರಹಸ್ಯವನ್ನು ಜ್ಞಾನಿಗಳೂ ಜೋತಿಷ್ಯರೂ ಮಂತ್ರಗಾರರೂ ಶಕುನ ಹೇಳುವವರೂ ಅರಸನಿಗೆ ತಿಳಿಸಲಾರರು.

28ಆದರೆ ಈ ರಹಸ್ಯಗಳನ್ನು ಪ್ರಕಟಪಡಿಸುವಂತ ದೇವರು ಪರಲೋಕದಲ್ಲಿದ್ದಾನೆ; ಆತನು ದಿವಸಗಳ ಅಂತ್ಯದಲ್ಲಿ ಸಂಭವಿಸುವಂತವುಗಳನ್ನು ಅರಸನಾದ ನೆಬೂಕದ್ನೆಚ್ಚ ರನಿಗೆ ತಿಳಿಯಪಡಿಸುತ್ತಾನೆ. ನಿನ್ನ ಕನಸಿನಲ್ಲಿ, ನಿನ್ನ ಹಾಸಿಗೆಯಲ್ಲಿ ಬಂದ ನಿನ್ನ ಮನಸ್ಸಿನ ದರ್ಶನಗಳು ಇವೇ ಆಗಿವೆ,

29ಓ ಅರಸನೇ, ನೀನು ಹಾಸಿಗೆಯ ಮೇಲೆ ಮಲಗಿರುವಾಗ ಇನ್ನು ಮುಂದೆ ಏನು ಸಂಭವಿ ಸುವದೋ ಎಂಬ ಯೋಚನೆಯು ನಿನ್ನಲ್ಲಿ ಹುಟ್ಟಿತಲ್ಲಾ! ಆ ರಹಸ್ಯಗಳನ್ನು ವ್ಯಕ್ತಪಡಿಸುವಾತನು ಮುಂದೆ ಸಂಭ ವಿಸುವದು ಏನೆಂಬದನ್ನು ನಿನಗೆ ಗೋಚರಪಡಿಸುತ್ತಾನೆ.

ದಾನಿಯೇಲನು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी