ಅವನು ರೊಟ್ಟಿ ತಿಂದು ನೀರು ಕುಡಿದ ತರುವಾಯ ಇವನು ಕರತಂದ ಪ್ರವಾದಿ ಗೋಸ್ಕರ ಕತ್ತೆಗೆ ತಡಿ ಹಾಕಿದನು.
21ಅವನು ಯೆಹೂದದಿಂದ ಬಂದ ದೇವರ ಮನುಷ್ಯನಿಗೆ--ನೀನು ಕರ್ತನ ಮಾತಿಗೆ ತಿರುಗಿಬಿದ್ದು ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾ ಪಿಸಿದ ಆಜ್ಞೆಯನ್ನು ಕೈಕೊಳ್ಳದೆ ಹಿಂದಕ್ಕೆ ಬಂದುರೊಟ್ಟಿ ತಿನ್ನಬೇಡ, ನೀರು ಕುಡಿಯಬೇಡ ಎಂದು ಕರ್ತನು ನಿನಗೆ ಹೇಳಿದ ಸ್ಥಳದಲ್ಲಿ
22ನೀನು ರೊಟ್ಟಿ ತಿಂದು ನೀರು ಕುಡಿದದ್ದರಿಂದ ನಿನ್ನ ಹೆಣ ನಿನ್ನ ಪಿತೃಗಳ ಸಮಾಧಿಗೆ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ ಎಂದು ಹೇಳಿದನು.
23ಅವನು ರೊಟ್ಟಿ ತಿಂದು ನೀರು ಕುಡಿದ ತರುವಾಯ ಇವನು ಕರತಂದ ಪ್ರವಾದಿ ಗೋಸ್ಕರ ಕತ್ತೆಗೆ ತಡಿ ಹಾಕಿದನು.
24ಅವನು ಹೋದ ತರುವಾಯ ಸಿಂಹವು ಅವನನ್ನು ದಾರಿಯಲ್ಲಿ ಹಿಡಿದು ಕೊಂದುಹಾಕಿತು. ಅವನ ಹೆಣ ದಾರಿಯಲ್ಲಿ ಹಾಕ ಲ್ಪಟ್ಟಿತು; ಕತ್ತೆಯೂ ಸಿಂಹವೂ ಹೆಣದ ಬಳಿಯಲ್ಲಿ ನಿಂತುಕೊಂಡಿದ್ದವು.
25ಆಗ ಇಗೋ, ಮನುಷ್ಯರು ಹಾದು ಹೋಗಿ ಮಾರ್ಗದಲ್ಲಿ ಬಿದ್ದಿರುವ ಹೆಣವನ್ನೂ ಹೆಣದ ಬಳಿಯಲ್ಲಿ ನಿಂತಿರುವ ಸಿಂಹವನ್ನೂ ನೋಡಿ ವೃದ್ಧ ಪ್ರವಾದಿಯು ವಾಸವಾಗಿರುವ ಪಟ್ಟಣಕ್ಕೆ ಬಂದು ತಿಳಿಸಿದರು;
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ