ಐಗುಪ್ತದೇಶದಲ್ಲಿದ್ದ ಸುಭಿಕ್ಷೆಯ ಏಳು ವರುಷ ಗಳು ಮುಗಿದ ತರುವಾಯ
51ಚೊಚ್ಚಲ ಮಗನಿಗೆ ಯೋಸೇಫನು ಮನಸ್ಸೆ ಎಂದು ಹೆಸರಿಟ್ಟನು. ಯಾಕಂದರೆ ಅವನು--ದೇವರು ನನ್ನ ಕಷ್ಟವನ್ನು ಮತ್ತು ನನ್ನ ತಂದೆಯ ಮನೆಯನ್ನೆಲ್ಲಾ ಮರೆತುಬಿಡುವಂತೆ ಮಾಡಿದನು ಅಂದನು.
52ಅವನು ತನ್ನ ಎರಡನೆಯ ಮಗನಿಗೆ ಎಫ್ರಾಯಾಮ್ ಎಂದು ಹೆಸರಿಟ್ಟನು: ಯಾಕಂದರೆ ನಾನು ಬಾಧೆಯನ್ನನುಭವಿಸಿದ ದೇಶದಲ್ಲಿ ಫಲಭರಿತ ನಾಗುವಂತೆ ದೇವರು ಮಾಡಿದ್ದಾನೆ ಅಂದನು.
53ಐಗುಪ್ತದೇಶದಲ್ಲಿದ್ದ ಸುಭಿಕ್ಷೆಯ ಏಳು ವರುಷ ಗಳು ಮುಗಿದ ತರುವಾಯ
54ಯೋಸೇಫನು ಹೇಳಿದಂತೆ ಬರುವದಕ್ಕಿದ್ದ ಬರಗಾಲದ ಏಳು ವರುಷ ಗಳು ಆರಂಭವಾದವು. ಆಗ ಎಲ್ಲಾ ದೇಶಗಳಲ್ಲಿ ಬರವಿತ್ತು. ಆದರೆ ಐಗುಪ್ತದೇಶದಲ್ಲೆಲ್ಲಾ ಆಹಾರ ವಿತ್ತು.
55ಐಗುಪ್ತದವರೆಲ್ಲಾ ಹಸಿದು ಜನರು ಆಹಾರ ಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ ಫರೋಹನು ಎಲ್ಲಾ ಐಗುಪ್ತದವರಿಗೆ--ಯೋಸೇಫನ ಬಳಿಗೆ ಹೋಗಿರಿ; ಅವನು ನಿಮಗೆ ಹೇಳುವದನ್ನು ಮಾಡಿರಿ ಅಂದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ