ಅರಣ್ಯಕಾಂಡ 20:14

ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.

ಸಂದರ್ಭದೊಂದಿಗೆ ಓದಿ · ಅರಣ್ಯಕಾಂಡ 20

12ಆಗ ಕರ್ತನು ಮೋಶೆ ಆರೋನನ ಸಂಗಡ ಮಾತನಾಡಿ--ನೀವು ಇಸ್ರಾಯೇಲ್‌ ಮಕ್ಕಳ ಕಣ್ಣುಗಳ ಮುಂದೆ ನನ್ನನ್ನು ಪರಿಶುದ್ಧಮಾಡುವದಕ್ಕೆ ನನ್ನಲ್ಲಿ ವಿಶ್ವಾಸಿ ಸದೆ ಇದ್ದ ಕಾರಣ ನಾನು ಅವರಿಗೆ ಕೊಟ್ಟ ದೇಶದಲ್ಲಿ ನೀವು ಸಮೂಹವನ್ನು ಸೇರಿಸುವದಿಲ್ಲ ಅಂದನು.

13ಇಸ್ರಾಯೇಲ್‌ ಮಕ್ಕಳು ಕರ್ತನ ಸಂಗಡ ವ್ಯಾಜ್ಯ ವಾಡಿದಕ್ಕಾಗಿ ಆತನು ಅವರಲ್ಲಿ ತನ್ನನ್ನು ಪರಿಶುದ್ಧ ಮಾಡಿಕೊಂಡ ಮೆರೀಬಾದ ನೀರು ಇದೇ.

14ಇದಲ್ಲದೆ ಮೋಶೆಯು ಕಾದೇಶಿನಿಂದ ಎದೋಮಿನ ಅರಸನ ಬಳಿಗೆ ದೂತರನ್ನು ಕಳುಹಿಸಿ ಹೇಳಿದ್ದೇನಂದರೆ--ನಿನ್ನ ಸಹೋದರನಾದ ಇಸ್ರಾಯೇ ಲನು ಹೇಳುವದೇನಂದರೆ--ನಮಗೆ ಉಂಟಾದ ಸಕಲ ಆಯಾಸವನ್ನು ನೀನು ಅರಿತಿದ್ದೀ.

15ನಮ್ಮ ಪಿತೃಗಳು ಐಗುಪ್ತಕ್ಕೆ ಇಳಿದು ಹೋದರು; ಐಗುಪ್ತದಲ್ಲಿ ನಾವು ಬಹಳ ದಿವಸ ವಾಸವಾಗಿದ್ದೆವು; ಐಗುಪ್ತದವರು ನಮಗೂ ನಮ್ಮ ಪಿತೃಗಳಿಗೂ ಕೇಡನ್ನು ಮಾಡಿದರು.

16ಆದಕಾರಣ ನಾವು ಕರ್ತನಿಗೆ ಕೂಗಿದೆವು; ಆತನು ನಮ್ಮ ಧ್ವನಿಯನ್ನು ಕೇಳಿ ದೂತನನ್ನು ಕಳುಹಿಸಿ ನಮ್ಮನ್ನು ಐಗುಪ್ತದೊಳಗಿಂದ ಹೊರಗೆ ತಂದನು; ಇಗೋ, ನಾವು ನಿನ್ನ ಮೇರೆಯ ಕಡೇ ಊರಾದ ಕಾದೇಶಿನ ಲ್ಲಿದ್ದೇವೆ.

ಅರಣ್ಯಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी