ಯೆಶಾಯ 29:9

ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ.

ಸಂದರ್ಭದೊಂದಿಗೆ ಓದಿ · ಯೆಶಾಯ 29

7ಅರೀಯೇಲಿನ ಮೇಲೆ ಹೋರಾಡಿ ಅದಕ್ಕೂ ಅದರ ಕೋಟೆಗೂ ವಿರುದ್ಧ ವಾಗಿ ಯುದ್ಧ ಮಾಡಿ ಬಾಧಿಸುವ ಸಕಲ ಜನಾಂಗಗಳ ಗುಂಪು ರಾತ್ರಿಯ ದರ್ಶನದ ಕನಸಿನಂತೆ ಮಾಯ ವಾಗುವದು.

8ಹಸಿದ ಮನುಷ್ಯನು ಕನಸುಕಂಡು ಇಗೋ, ಉಣ್ಣುತ್ತಾನೆ ಆದರೆ ಅವನು ಎಚ್ಚತ್ತಾಗ ಪ್ರಾಣ ತುಂಬದ ಹಾಗೆಯೂ ಇಲ್ಲವೆ ಬಾಯಾರಿದ ವನು ಸ್ವಪ್ನದಲ್ಲಿ ಇಗೋ, ಕುಡಿಯುತ್ತಾನೆ ಆದರೆ ಅವನು ಎಚ್ಚರವಾದಾಗ ಇಗೋ, ಬಲಹೀನನಾಗಿದ್ದು ಪ್ರಾಣ ಆಶಿಸುವ ಹಾಗೆಯೂ ಚೀಯೋನ್‌ ಪರ್ವ ತಕ್ಕೆ ವಿರೋಧವಾಗಿ ಯುದ್ಧಮಾಡುವ ಹಾಗೆಯೇ ಎಲ್ಲಾ ಜನಾಂಗಗಳ ಸಮೂಹವಿರುವದು.

9ತಾಮಸಮಾಡಿ ಆಶ್ಚರ್ಯಪಡಿರಿ, ನೀವು ಕೂಗಿರಿ, ಕೂಗಾಡಿರಿ ಇವರು ಅಮಲೇರಿದ್ದಾರೆ; ಆದರೆ ದ್ರಾಕ್ಷಾ ರಸದಿಂದಲ್ಲ; ಅವರು ಕೂಗಾಡುತ್ತಾರೆ, ಆದರೆ ಮದ್ಯ ದಿಂದಲ್ಲ.

10ಕರ್ತನು ನಿಮ್ಮ ಮೇಲೆ ಗಾಢ ನಿದ್ರೆಯ ಆತ್ಮವನ್ನು ಹೊಯಿದು ನಿಮ್ಮ ಕಣ್ಣುಗಳನ್ನು ಮುಚ್ಚಿದ್ದಾನೆ; ಪ್ರವಾದಿಗಳನ್ನೂ ನಿಮ್ಮ ಮುಖ್ಯಸ್ಥರಾದ ದರ್ಶಿಗಳನ್ನೂ ಮುಚ್ಚಿದ್ದಾನೆ.

11ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿ ದ ವಾಕ್ಯಗಳ ಪುಸ್ತಕದ ಹಾಗಾಯಿತು; ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು ಇದನ್ನು ಓದು ಎಂದು ಬೇಡಿದರೆ ಅವನು--ಮುದ್ರೆ ಹಾಕಿದೆಯಲ್ಲಾ, ಆಗುವದಿಲ್ಲ ಅನ್ನು ವನು;

ಯೆಶಾಯ 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी