ಯಾಜಕಕಾಂಡ 6:5

ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 6

3ಕಳೆದುಹೋಗಿದ್ದು ಸಿಕ್ಕಿ ಅದರ ವಿಷಯದಲ್ಲಿ ಸುಳ್ಳಾ ಡಿದರೆ ಮತ್ತು ಸುಳ್ಳಾಗಿ ಪ್ರಮಾಣಮಾಡಿದರೆ ಇವೆಲ್ಲವುಗಳಲ್ಲಿ ಯಾವದನ್ನಾದರೂ ಒಬ್ಬ ಮನುಷ್ಯನು ಮಾಡಿದ್ದರೆ ಅವುಗಳಲ್ಲಿ ಪಾಪಮಾಡುವನು.

4ಅವನು ಪಾಪಮಾಡಿ ಅಪರಾಧಿಯಾಗಿರುವದರಿಂದ ಅವನು ಬಲಾತ್ಕಾರವಾಗಿ ಪಡೆದುಕೊಂಡದ್ದನ್ನೂ ಮೋಸದಿಂದ ಪಡೆದ ವಸ್ತುವನ್ನೂ ಅವನ ವಶಕ್ಕೆ ಇಟ್ಟುಕೊಳ್ಳಲು ಕೊಟ್ಟದ್ದನ್ನೂ ಕಳೆದುಹೋಗಿ ಸಿಕ್ಕಿದ ವಸ್ತುವನ್ನೂ ಹಿಂದಕ್ಕೆ ಕೊಡುವಂತಾಗಬೇಕು.

5ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.

6ಅವನು ತನ್ನ ಅತಿಕ್ರಮ ಬಲಿಯನ್ನು ಕರ್ತನ ಸನ್ನಿಧಿಗೆ ನಿನ್ನ ಅಂದಾಜಿನ ಮೇರೆಗೆ ಮಂದೆಯಿಂದ ದೋಷ ವಿಲ್ಲದ ಒಂದು ಟಗರನ್ನು ಅತಿಕ್ರಮ ಬಲಿಗಾಗಿ ಯಾಜಕನ ಬಳಿಗೆ ತರಬೇಕು.

7ಯಾಜಕನು ಅವನಿಗಾಗಿ ಕರ್ತನ ಮುಂದೆ ಪ್ರಾಯಶ್ಚಿತ್ತಮಾಡಬೇಕು. ಅತಿ ಕ್ರಮವಾಗಿ ಅವನು ಏನನ್ನಾದರೂ ಮಾಡಿದ್ದರೆ ಅದು ಅವನಿಗೆ ಕ್ಷಮಿಸಲ್ಪಡುವದು ಅಂದನು.

ಯಾಜಕಕಾಂಡ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी