ಆದಿಕಾಂಡ 47:12

ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 47

10ಆಗ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.

11ಯೋಸೇಫನು ತನ್ನ ತಂದೆಗೂ ತನ್ನ ಸಹೋದರ ರಿಗೂ ನಿವಾಸವನ್ನು ಕೊಟ್ಟು ಫರೋಹನ ಅಪ್ಪಣೆಯ ಪ್ರಕಾರ ಐಗುಪ್ತದೇಶದ ಉತ್ತಮವಾದದ್ದರಲ್ಲಿ ರಮ್ಸೇಸ್‌ ಸೀಮೆಯಲ್ಲಿ ಸ್ವಾಸ್ಥ್ಯವನ್ನು ಕೊಟ್ಟನು.

12ಯೋಸೇಫನು ತನ್ನ ತಂದೆಯನ್ನೂ ತನ್ನ ಸಹೋ ದರರನ್ನೂ ತನ್ನ ತಂದೆಯ ಮನೆಯವರೆಲ್ಲರನ್ನೂ ಕುಟುಂಬಗಳ ಪ್ರಕಾರ ಆಹಾರಕ್ಕೆ ಕೊಟ್ಟು ಅವರನ್ನು ಸಂರಕ್ಷಣೆ ಮಾಡಿದನು.

13ಆದರೆ ಬರವು ಅತಿ ಘೋರವಾಗಿದ್ದರಿಂದ ದೇಶದಲ್ಲೆಲ್ಲಾ ಆಹಾರ ಇರಲಿಲ್ಲ. ಐಗುಪ್ತದೇಶವೂ ಕಾನಾನ್‌ದೇಶವೂ ಕ್ಷಾಮದಿಂದ ಕ್ಷೀಣವಾದವು.

14ಆಗ ಯೋಸೇಫನು ಐಗುಪ್ತದೇಶದಲ್ಲಿಯೂ ಕಾನಾನ್‌ದೇಶದಲ್ಲಿಯೂ ಜನರು ಕೊಂಡುಕೊಂಡ ಧಾನ್ಯಕ್ಕೆ ಬದಲಾಗಿ ಕೊಟ್ಟ ಹಣವನ್ನೆಲ್ಲಾ ಕೂಡಿಸಿ ಅದನ್ನು ಫರೋಹನ ಮನೆಗೆ ತಂದನು.

ಆದಿಕಾಂಡ 47 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी