ಯೆರೆಮಿಯ 44:3

ಅವರು ನನಗೆ ಕೋಪವನ್ನು ಎಬ್ಬಿಸುವ ಹಾಗೆ ತಾವೂ ತಮ್ಮ ತಂದೆಗಳೂ ಅರಿಯದ ಬೇರೆ ದೇವರುಗಳನ್ನು ಸೇವಿಸಿ ಧೂಪಸುಟ್ಟು ಮಾಡಿದ ಕೆಟ್ಟತನದ ನಿಮಿತ್ತ ಇಗೋ, ಅವು ಈ ಹೊತ್ತು ಹಾಳಾಗಿವೆ; ಅವುಗಳಲ್ಲಿ ವಾಸಮಾಡುವವರು ಯಾರೂ ಇಲ್ಲ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 44

1ಐಗುಪ್ತದ ಮಿಗ್ದೋಲ್‌ನಲ್ಲಿಯೂ ತಹಪನೇಸನಲ್ಲಿಯೂ ನೋಫನಲ್ಲಿಯೂ ಪತ್ರೋಸ್‌ ದೇಶದಲ್ಲಿಯೂ ವಾಸಮಾಡುತ್ತಿದ್ದ ಯೆಹೂದ್ಯರೆಲ್ಲರ ವಿಷಯವಾಗಿ ಯೆರೆವಿಾಯನಿಗೆ ಉಂಟಾದ ವಾಕ್ಯವು ಏನಂದರೆ--

2ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಯೆರೂಸಲೇಮಿನ ಮೇಲೆಯೂ ಯೆಹೂದದ ಎಲ್ಲಾ ಪಟ್ಟಣಗಳ ಮೇಲೆಯೂ ಬರಮಾಡಿದ ಎಲ್ಲಾ ಕೇಡನ್ನು ನೀವು ನೋಡಿದ್ದೀರಿ.

3ಅವರು ನನಗೆ ಕೋಪವನ್ನು ಎಬ್ಬಿಸುವ ಹಾಗೆ ತಾವೂ ತಮ್ಮ ತಂದೆಗಳೂ ಅರಿಯದ ಬೇರೆ ದೇವರುಗಳನ್ನು ಸೇವಿಸಿ ಧೂಪಸುಟ್ಟು ಮಾಡಿದ ಕೆಟ್ಟತನದ ನಿಮಿತ್ತ ಇಗೋ, ಅವು ಈ ಹೊತ್ತು ಹಾಳಾಗಿವೆ; ಅವುಗಳಲ್ಲಿ ವಾಸಮಾಡುವವರು ಯಾರೂ ಇಲ್ಲ.

4ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು.

5ಆದರೆ ಅವರು ಕೇಳಲಿಲ್ಲ; ತಮ್ಮ ಕೆಟ್ಟತನದಿಂದ ತಿರುಗದೆಯೂ, ಬೇರೆ ದೇವರುಗಳಿಗೆ ಧೂಪಸುಡು ವದನ್ನು ಬಿಡದೆಯೂ ಇದ್ದರು; ನನ್ನ ಮಾತಿಗೆ ಕಿವಿ ಗೊಡಲಿಲ್ಲ.

ಯೆರೆಮಿಯ 44 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी