ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
8ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು.
9ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
10ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು.
11ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು.
12ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ