ಯೆರೆಮಿಯ 20:3

ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್‌ ಮಿಸ್ಸಾ ಬೀಬ್‌ನೆಂದು ಕರೆಯುತ್ತಾನೆಂದು ಹೇಳಿದನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 20

1ಯೆರೆವಿಾಯನು ಈ ಮಾತುಗಳನ್ನು ಪ್ರವಾದಿಸಲಾಗಿ ಕರ್ತನ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗನಾದ ಪಷ್ಹೂರನು ಕೇಳಿದನು.

2ಆಗ ಪಷ್ಹೂರನು ಪ್ರವಾದಿಯಾದ ಯೆರೆವಿಾಯನನ್ನು ಹೊಡೆದು ಅವನನ್ನು ಕರ್ತನ ಆಲಯದ ಬಳಿಯಲ್ಲಿದ್ದ ಬೆನ್ಯಾವಿಾ ನನ ಮೇಲ್ಭಾಗಲಲ್ಲಿದ್ದ ಕೋಳದಲ್ಲಿ ಹಾಕಿಸಿದನು.

3ಮರುದಿನದಲ್ಲಿ ಆದದ್ದೇನಂದರೆ, ಪಷ್ಹೂರನು ಯೆರೆವಿಾಯನನ್ನು ಕೋಳದಿಂದ ಬಿಡಿಸಿದನು. ಆಗ ಯೆರೆವಿಾಯನು ಅವನಿಗೆ--ಕರ್ತನು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ, ಮಾಗೋರ್‌ ಮಿಸ್ಸಾ ಬೀಬ್‌ನೆಂದು ಕರೆಯುತ್ತಾನೆಂದು ಹೇಳಿದನು.

4ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.

5ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ ಅದರ ಎಲ್ಲಾ ಕಷ್ಟಾರ್ಜಿತವನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ ಯೆಹೂ ದದ ಅರಸರ ಎಲ್ಲಾ ಭಂಡಾರಗಳನ್ನೂ ಒಪ್ಪಿಸುವೆನು; ಶತ್ರುಗಳ ಕೈಗೆ ಅವರನ್ನು ಒಪ್ಪಿಸುವೆನು. ಅವರು ಅವುಗಳನ್ನು ಸುಲುಕೊಂಡು ತಕ್ಕೊಂಡು ಬಾಬೆಲಿಗೆ ಒಯ್ಯುವರು.

ಯೆರೆಮಿಯ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी