೧ ಸಮುವೇಲನು 6:17

ಫಿಲಿಷ್ಟಿಯರು ಅಪರಾಧ ಬಲಿಗಾಗಿ ಅಷ್ಡೋದಿ ನಿಂದ ಒಂದು ಗಾಜಕ್ಕೋಸ್ಕರ ಒಂದು ಅಷ್ಕೆಲೋನಿ ಗೋಸ್ಕರ ಒಂದು ಗತ್‌ನಿಂದ ಒಂದು ಎಕ್ರೋನಿನಿಂದ ಒಂದು ಗಡ್ಡೆವ್ಯಾಧಿಯ ನಿಮಿತ್ತದಿಂದ ಒಂದೊಂದು ಬಂಗಾರದ ರೂಪಗಳನ್ನು ಕರ್ತನಿಗೆ ಅರ್ಪಿಸಿದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 6

15ಅಲ್ಲಿ ಒಂದು ದೊಡ್ಡ ಕಲ್ಲು ಇತ್ತು. ಆಗ ಅವರು ಆ ಬಂಡಿಯ ಕಟ್ಟಿಗೆಗಳನ್ನು ಸೀಳಿ ಹಸು ಗಳನ್ನು ಕರ್ತನಿಗೆ ದಹನಬಲಿಯಾಗಿ ಅರ್ಪಿಸಿದರು. ಲೇವಿಯರು ಕರ್ತನ ಮಂಜೂಷವನ್ನೂ ಅದರ ಸಂಗಡ ಇದ್ದ ಬಂಗಾರದ ಕಾಣಿಕೆಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟುಕೊಂಡಿದ್ದರು. ಆದರೆ ಬೇತ್ಷೆಮೆಷಿನ ಮನುಷ್ಯರು ಆ ದಿವಸದಲ್ಲಿ ಕರ್ತನಿಗೆ ದಹನಬಲಿಗಳನ್ನೂ ಬಲಿಗಳನ್ನೂ ಅರ್ಪಿಸಿ ದರು.

16ಆದರೆ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳು ಇವುಗಳನ್ನು ನೋಡಿ ಅದೇ ದಿನದಲ್ಲಿ ತಿರಿಗಿ ಎಕ್ರೋನಿಗೆ ಹೋದರು.

17ಫಿಲಿಷ್ಟಿಯರು ಅಪರಾಧ ಬಲಿಗಾಗಿ ಅಷ್ಡೋದಿ ನಿಂದ ಒಂದು ಗಾಜಕ್ಕೋಸ್ಕರ ಒಂದು ಅಷ್ಕೆಲೋನಿ ಗೋಸ್ಕರ ಒಂದು ಗತ್‌ನಿಂದ ಒಂದು ಎಕ್ರೋನಿನಿಂದ ಒಂದು ಗಡ್ಡೆವ್ಯಾಧಿಯ ನಿಮಿತ್ತದಿಂದ ಒಂದೊಂದು ಬಂಗಾರದ ರೂಪಗಳನ್ನು ಕರ್ತನಿಗೆ ಅರ್ಪಿಸಿದರು.

18ಆದರೆ ಅವರು ಕಳುಹಿಸಿದ ಬಂಗಾರದ ಇಲಿಗಳು ಬೇತ್ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಈ ದಿನದ ವರೆಗೂ ಇರುವ ಕರ್ತನ ಮಂಜೂಷವನ್ನು ಇಳಿಸಿದ ಅಬೇಲೆಂಬ ದೊಡ್ಡ ಕಲ್ಲಿನ ವರೆಗೆ ಫಿಲಿಷ್ಟಿಯರ ಐದು ಮಂದಿ ಅಧಿಪತಿಗಳ ಬಲವುಳ್ಳ ಪಟ್ಟಣಗಳ, ಗ್ರಾಮಗಳ, ಲೆಕ್ಕಕ್ಕೆ ಸರಿಯಾಗಿದ್ದವು.

19ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು.

೧ ಸಮುವೇಲನು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी