೧ ಅರಸುಗಳು 14:26

ಅವನು ಕರ್ತನ ಮಂದಿರದ ಬೊಕ್ಕಸಗಳನ್ನೂ ಅರ ಸರ ಮನೆಯ ಬೊಕ್ಕಸಗಳನ್ನೂ ತೆಗೆದುಕೊಂಡದ್ದಲ್ಲದೆ ಸಮಸ್ತವನ್ನೂ ತೆಗೆದುಕೊಂಡನು. ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತಕ್ಕೊಂಡು ಹೋದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 14

24ಅವರು ಇಸ್ರಾಯೇಲಿನ ಮಕ್ಕಳ ಮುಂದೆ ಕರ್ತನು ಹೊರಡಿಸಿದ ಜನಾಂಗಗಳ ಸಕಲ ಅಸಹ್ಯ ಕೃತ್ಯಗಳ ಪ್ರಕಾರ ಮಾಡುತ್ತಾ ಇದ್ದರು.

25ಅರಸನಾದ ರೆಹಬ್ಬಾಮನ ಐದನೇ ವರುಷದಲ್ಲಿ ಏನಾಯಿತಂದರೆ, ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರೋಧವಾಗಿ ಏರಿ ಬಂದನು.

26ಅವನು ಕರ್ತನ ಮಂದಿರದ ಬೊಕ್ಕಸಗಳನ್ನೂ ಅರ ಸರ ಮನೆಯ ಬೊಕ್ಕಸಗಳನ್ನೂ ತೆಗೆದುಕೊಂಡದ್ದಲ್ಲದೆ ಸಮಸ್ತವನ್ನೂ ತೆಗೆದುಕೊಂಡನು. ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತಕ್ಕೊಂಡು ಹೋದನು.

27ಆದರೆ ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅರಮನೆಯ ಬಾಗಿಲನ್ನು ಕಾಯುವ ಕಾವಲಿ ನವರ ಅಧಿಪತಿಯ ಕೈಯಲ್ಲಿ ಒಪ್ಪಿಸಿದನು.

28ಅರಸನು ಕರ್ತನ ಮನೆಗೆ ಹೋಗುತ್ತಿರುವಾಗ ಕಾವಲಿನವರು ಅವುಗಳನ್ನು ಎತ್ತಿಕೊಂಡು ಬಂದರು; ಮತ್ತು ಅವುಗಳನ್ನು ಹಿಂದಕ್ಕೆ ಕಾವಲಿನ ಚಾವಡಿಗೆ ತಂದರು.

೧ ಅರಸುಗಳು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी