ಆಗ ನಾವು ಈ ರೀತಿಯಾಗಿ ಅವರಿಗೆ ಹೇಳಿದ ತರುವಾಯ ಈ ಕಟ್ಟುವಿಕೆಯನ್ನು ಮಾಡುವ ಮನುಷ್ಯರ ಹೆಸರುಗಳೇನೆಂದು ಕೇಳಿದರು.
2ಆಗ ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲನೂ ಯೋಚಾದಾಕನ ಮಗ ನಾದ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿ ರುವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿ ದರು; ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
3ಆ ವೇಳೆಯಲ್ಲಿ ನದಿಯ ಈಚೆಯಲ್ಲಿರುವ ತತ್ತೆನೈನೆಂಬ ಅಧಿಪತಿಯೂ ಶೆತ ರ್ಬೋಜೆನೈಯೂ, ಅವರ ಜೊತೆಗಾರರೂ ಅವರ ಬಳಿಗೆ ಬಂದು--ಈ ಮನೆಯನ್ನು ಕಟ್ಟುವದಕ್ಕೂ ಈ ಗೋಡೆಯನ್ನು ಕಟ್ಟಿತೀರಿಸುವದಕ್ಕೂ ನಿಮಗೆ ಅಪ್ಪಣೆ ಕೊಟ್ಟವರು ಯಾರೆಂದು ಅವರನ್ನು ಕೇಳಿದರು.
4ಆಗ ನಾವು ಈ ರೀತಿಯಾಗಿ ಅವರಿಗೆ ಹೇಳಿದ ತರುವಾಯ ಈ ಕಟ್ಟುವಿಕೆಯನ್ನು ಮಾಡುವ ಮನುಷ್ಯರ ಹೆಸರುಗಳೇನೆಂದು ಕೇಳಿದರು.
5ಆದರೆ ಈ ಕಾರ್ಯವು ದಾರ್ಯಾವೆಷನ ಬಳಿಗೆ ಬರುವ ವರೆಗೂ ಅವರು ಇವರನ್ನು ನಿಲ್ಲಿಸದ ಹಾಗೆ ಇವರ ದೇವರ ಕಣ್ಣು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆಗ ಇದನ್ನು ಕುರಿತು ಅವರು ಪ್ರತ್ಯುತ್ತರವನ್ನು ಪತ್ರದಲ್ಲಿ ಕಳುಹಿಸಿದರು.
6ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆ ನೈಯೂ ಶೆತರ್ಬೋಜೆನೈಯೂ ನದಿಯ ಈಚೆಯ ಲ್ಲಿರುವ ಅಪರ್ಸತ್ಕಾಯರಾದ ಅವನ ಜೊತೆಗಾರರೂ ಅರಸನಾದ ದಾರ್ಯಾವೆಷನಿಗೆ ಬರೆದು ಕಳುಹಿಸಿದ ಪತ್ರದ ಪ್ರತಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ