ಯೆಹೋಶುವ 9:11

ನಮ್ಮ ಹಿರಿಯರೂ ನಮ್ಮ ದೇಶ ನಿವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇ ನಂದರೆ--ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದು ಕೊಂಡು ಅವರೆದುರಿಗೆ ಹೋಗಿ ಅವರಿಗೆ--ನಾವು ನಿಮ್ಮ ಸೇವಕರು; ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಎಂದು ಹೇಳಿರಿ ಅಂದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 9

9ಅವರು ಅವನಿಗೆ--ನಿಮ್ಮ ದೇವರಾದ ಕರ್ತನ ಹೆಸರಿಗೋಸ್ಕರ ನಿನ್ನ ಸೇವಕರಾದ ನಾವು ದೂರದೇಶದಿಂದ ಬಂದೆವು. ಯಾಕಂದರೆ ಆತನ ಕೀರ್ತಿಯನ್ನೂ ಆತನು ಐಗುಪ್ತದಲ್ಲಿ ಮಾಡಿದ ಎಲ್ಲವನ್ನೂ

10ಯೊರ್ದನಿಗೆ ಆಚೆಯಿರುವ ಅಮೋರಿಯರ ಇಬ್ಬರು ಅರಸುಗಳಾದ ಹೆಷ್ಬೋನಿನ ಅರಸನಾದ ಸೀಹೋನನಿಗೂ ಅಷ್ಟರೋತಿನಲ್ಲಿದ್ದ ಬಾಷಾನಿನ ಅರಸನಾದ ಓಗನಿಗೂ ಮಾಡಿದ್ದೆಲ್ಲವನ್ನೂ ನಾವು ಕೇಳಿದೆವು.

11ನಮ್ಮ ಹಿರಿಯರೂ ನಮ್ಮ ದೇಶ ನಿವಾಸಿಗಳಾದ ಜನರೆಲ್ಲರೂ ನಮಗೆ ಹೇಳಿದ್ದೇ ನಂದರೆ--ನೀವು ಪ್ರಯಾಣಕ್ಕಾಗಿ ರೊಟ್ಟಿಯನ್ನು ತೆಗೆದು ಕೊಂಡು ಅವರೆದುರಿಗೆ ಹೋಗಿ ಅವರಿಗೆ--ನಾವು ನಿಮ್ಮ ಸೇವಕರು; ಆದಕಾರಣ ಈಗ ನಮ್ಮ ಸಂಗಡ ಒಡಂಬಡಿಕೆ ಮಾಡಿರಿ ಎಂದು ಹೇಳಿರಿ ಅಂದರು.

12ನಾವು ನಿಮ್ಮ ಬಳಿಗೆ ಹೊರಟ ದಿನದಲ್ಲಿ ನಮ್ಮ ಪ್ರಯಾಣಕ್ಕೆ ಮನೆಯಿಂದ ಬಿಸಿ ರೊಟ್ಟಿಗಳನ್ನು ತೆಗೆದು ಕೊಂಡಿದ್ದೆವು; ಆದರೆ ಈಗ ಅವು ಒಣಗಿಹೋಗಿವೆ.

13ನಾವು ದ್ರಾಕ್ಷಾರಸ ತುಂಬುವಾಗ ಈ ಬುದ್ದಲಿಗಳು ಹೊಸವಾಗಿದ್ದವು. ಇಗೋ, ಅವು ಹರಿದುಹೋದವು. ಇದಲ್ಲದೆ ಪ್ರಯಾಣ ಬಹಳ ದೂರವಾದದರಿಂದ ಈ ನಮ್ಮ ವಸ್ತ್ರಗಳೂ ನಮ್ಮ ಕೆರಗಳೂ ಹಳೇವಾದವು ಅಂದರು.

ಯೆಹೋಶುವ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी