ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ?
9ಕಣತುಳಿಯುವ ಎತ್ತಿನ ಬಾಯನ್ನು ನೀನು ಕಟ್ಟಬಾರದು ಎಂದು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದದೆ. ದೇವರು ಚಿಂತಿಸು ವದು ಎತ್ತುಗಳಿಗಾಗಿಯೋ?
10ಇಲ್ಲವೆ ನಮಗೋಸ್ಕರ ವಾಗಿಯೇ ಆತನು ಹೇಳುತ್ತಾನೋ? ಉಳುವವನು ನಿರೀಕ್ಷೆಯಿಂದ ಉಳಬೇಕು, ನಿರೀಕ್ಷೆಯಲ್ಲಿ ಕಣತುಳಿಸು ವವನು ತನ್ನ ನಿರೀಕ್ಷೆಯಲ್ಲಿ ಪಾಲುಗಾರನಾಗಿರಬೇಕು ಎಂದು ನಮಗೋಸ್ಕರ ನಿಸ್ಸಂದೇಹವಾಗಿ ಇದು ಬರೆಯಲ್ಪಟ್ಟಿತು.
11ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ?
12ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ.
13ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ