ಅಪೊಸ್ತಲರ ಕೃತ್ಯಗಳು 1:20

ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 1

18ಈ ಮನುಷ್ಯನು ತನ್ನ ದ್ರೋಹದ ಫಲದಿಂದ ಹೊಲವನ್ನು ಕೊಂಡುಕೊಂಡನು; ತಲೆ ಕೆಳಗಾಗಿ ಬಿದ್ದು ಅವನ ಹೊಟ್ಟೆ ಒಡೆದು ಕರುಳು ಗಳೆಲ್ಲಾ ಹೊರಬಿದ್ದವು.

19ಇದು ಯೆರೂಸಲೇಮ್‌ ನಿವಾಸಿಗಳೆಲ್ಲರಿಗೆ ತಿಳಿದು ಬಂದದ್ದರಿಂದ ಅವರ ಭಾಷೆಯಲ್ಲಿ ಆ ಹೊಲವು--ಅಕೆಲ್ದಮಾ ಎಂದು ಕರೆಯಲ್ಪ ಟ್ಟಿದೆ, ಅಂದರೆ ರಕ್ತದ ಹೊಲ ಎಂಬದು.

20ಯಾಕಂ ದರೆ--ಅವನ ನಿವಾಸವು ಹಾಳುಬೀಳಲಿ; ಯಾವ ಮನುಷ್ಯನೂ ಅಲ್ಲಿ ವಾಸಮಾಡದಿರಲಿ; ಇನ್ನು ಅವನ ಅಧ್ಯಕ್ಷತೆಯನ್ನು ಬೇರೊಬ್ಬನು ತೆಗೆದುಕೊಳ್ಳಲಿ ಎಂದು ಕೀರ್ತನೆಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ.

21ಆದಕಾರಣ ಕರ್ತನಾದ ಯೇಸು ನಮ್ಮಲ್ಲಿ ಬರುತ್ತಾ ಹೋಗುತ್ತಾ ಇದ್ದ ಕಾಲದಲ್ಲೆಲ್ಲಾ ನಮ್ಮ ಸಂಗಡ ಇದ್ದ ಈ ಮನುಷ್ಯರಲ್ಲಿ

22ಯೋಹಾನನ ಬಾಪ್ತಿಸ್ಮ ಮೊದಲು ಗೊಂಡು ಆತನು ನಮ್ಮಿಂದ ಎತ್ತಲ್ಪಟ್ಟ ದಿನದವರೆಗೆ ನಮ್ಮೊಂದಿಗೆ ಒಬ್ಬನನ್ನು ಆತನ ಪುನರುತ್ಥಾನದ ವಿಷಯವಾಗಿ ಸಾಕ್ಷಿಯಾಗಿರುವಂತೆ ನೇಮಿಸತಕ್ಕದ್ದು.

ಅಪೊಸ್ತಲರ ಕೃತ್ಯಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी