ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವದಿಲ್ಲವೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
9ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ದೇವಾಲಯವನ್ನು ಕಟ್ಟುವ ಹಾಗೆ ಸೈನ್ಯಗಳ ಕರ್ತನ ಆಲಯದ ಅಸ್ತಿವಾರವು ಹಾಕಲ್ಪಟ್ಟ ದಿವಸದಲ್ಲಿದ್ದ ಪ್ರವಾದಿಗಳ ಬಾಯಿಂದಾದ ಈ ವಾಕ್ಯಗಳನ್ನು ಈ ದಿವಸಗಳಲ್ಲಿ ಕೇಳುವವರೇ, ನಿಮ್ಮ ಕೈಗಳು ಬಲವಾಗಿರಲಿ.
10ಈ ದಿವಸಗಳಿಗಿಂತ ಮುಂಚೆ ಮನುಷ್ಯನಿಗೆ ಕೂಲಿ ಇರಲಿಲ್ಲ, ಪಶುಗಳಿಗೆ ಕೂಲಿ ಇರಲಿಲ್ಲ; ಇಲ್ಲವೆ ಹೋಗುವವ ನಿಗೂ ಬರುವವನಿಗೂ ಇಕ್ಕಟ್ಟಿನ ದೆಸೆಯಿಂದ ಸಮಾ ಧಾನವಿರಲಿಲ್ಲ. ನಾನು ಜನರೆಲ್ಲರಲ್ಲಿ ಪ್ರತಿಯೊಬ್ಬನನ್ನು ತನ್ನ ನೆರೆಯವನಿಗೆ ವಿರೋಧವಾಗಿ ಇಟ್ಟಿದ್ದೆನು.
11ಆದರೆ ಈಗ ಉಳಿದ ಈ ಜನರಿಗೆ ನಾನು ಪೂರ್ವದ ದಿವಸಗಳಲ್ಲಿದ್ದ ಹಾಗೆ ಇರುವದಿಲ್ಲವೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
12ಬೀಜವುವೃದ್ಧಿಯಾಗುವದು; ದ್ರಾಕ್ಷೇ ಬಳ್ಳಿ ತನ್ನ ಫಲವನ್ನು ಕೊಡುವದು; ಭೂಮಿಯು ತನ್ನ ಹುಟ್ಟುವಳಿಯನ್ನು ಹೆಚ್ಚಾಗಿ ಕೊಡುವದು; ಆಕಾಶ ಗಳು ತಮ್ಮ ಮಂಜನ್ನು ಕೊಡುವವು; ಈ ಜನರಲ್ಲಿ ಉಳಿದವರು ಇವುಗಳನ್ನೆಲ್ಲಾ ಸ್ವಾಧೀನ ಮಾಡಿಕೊಳ್ಳು ವಂತೆ ಮಾಡುವೆನು.
13ಆಗುವದೇನಂದರೆ, ಓ ಯೆಹೂದದ ಮನೆತನದವರೇ, ಇಸ್ರಾಯೇಲಿನ ಮನೆತನದವರೇ, ನೀವು ಜನಾಂಗಗಳಲ್ಲಿ ಶಾಪವಾಗಿದ್ದ ಪ್ರಕಾರ ನಾನು ನಿಮ್ಮನ್ನು ರಕ್ಷಿಸುವೆನು ಮತ್ತು ನೀವು ಆಶೀರ್ವಾದವಾಗಿರುವಿರಿ; ಭಯಪಡಬೇಡಿರಿ; ನಿಮ್ಮ ಕೈಗಳು ಬಲವಾಗಿರಲಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ