೧ ಸಮುವೇಲನು 28:22

ಆದದ ರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನ್ನ ಮುಂದೆ ಒಂದು ರೊಟ್ಟಿಯ ತುಂಡನ್ನು ಇರಿಸಲು ನನಗೆ ಅಪ್ಪಣೆ ಕೊಡು; ನೀನು ತಿನ್ನು ಅಂದಳು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 28

20ಆಗ ಸೌಲನು ನೆಲದ ಮೇಲೆ ಬೋರ್ಲ ಬಿದ್ದು ಸಮುವೇಲನ ಮಾತುಗಳಿಗೋಸ್ಕರ ಬಹಳವಾಗಿ ಭಯ ಪಟ್ಟನು. ಆ ದಿನವೆಲ್ಲಾ ಊಟ ಮಾಡದೆ ಇದ್ದದರಿಂದ ಅವನೊಳಗೆ ಶಕ್ತಿ ಇಲ್ಲದೆ ಹೋಯಿತು.

21ಆಗ ಆ ಸ್ತ್ರೀಯು ಅವನ ಬಳಿಗೆ ಬಂದು ಅವನು ಬಹಳ ತಲ್ಲಣ ಪಟ್ಟನೆಂದು ನೋಡಿ ಅವನಿಗೆ--ಇಗೋ, ನಿನ್ನ ದಾಸಿಯಾದ ನಾನು ನಿನ್ನ ಮಾತನ್ನು ಕೇಳಿ ನನ್ನ ಪ್ರಾಣವನ್ನು ನನ್ನ ಕೈಯಲ್ಲಿ ಇಟ್ಟುಕೊಂಡೆನು; ನೀನು ನನಗೆ ಹೇಳಿದ ಮಾತುಗಳನ್ನು ಕೇಳಿದೆನು.

22ಆದದ ರಿಂದ ಈಗ ನೀನು ನಿನ್ನ ದಾಸಿಯ ಮಾತನ್ನು ಕೇಳಿ ನೀನು ಮಾರ್ಗ ಹಿಡಿದು ನಡೆಯುವಾಗ ನಿನಗೆ ಶಕ್ತಿ ಇರುವ ಹಾಗೆ ನಾನು ನಿನ್ನ ಮುಂದೆ ಒಂದು ರೊಟ್ಟಿಯ ತುಂಡನ್ನು ಇರಿಸಲು ನನಗೆ ಅಪ್ಪಣೆ ಕೊಡು; ನೀನು ತಿನ್ನು ಅಂದಳು.

23ಅದಕ್ಕವನು ಒಪ್ಪದೆ--ನಾನು ತಿನ್ನುವದಿಲ್ಲ ಅಂದನು. ಆದರೆ ಅವನ ದಾಸರೂ ಆ ಸ್ತ್ರೀಯೂ ಅವನನ್ನು ಬಲವಂತಮಾಡಿದ್ದರಿಂದ ಅವನು ಅವರ ಮಾತನ್ನು ಕೇಳಿ ನೆಲವನ್ನು ಬಿಟ್ಟು ಎದ್ದು ಮಂಚದ ಮೇಲೆ ಕುಳಿತುಕೊಂಡನು.

24ಆ ಸ್ತ್ರೀಗೆ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು; ಅವಳು ಅದನ್ನು ತ್ವರೆಯಾಗಿ ಕೊಯ್ದು, ಹಿಟ್ಟನ್ನು ಹಿಸುಕಿ ಹುಳಿ ಇಲ್ಲದ ರೊಟ್ಟಿಗಳಾಗಿ ಸುಟ್ಟು

೧ ಸಮುವೇಲನು 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी