ಲೂಕನು 17:8

ಹಾಗೆ ಹೇಳದೆ--ನಾನು ಊಟ ಮಾಡುವಂತೆ ನೀನು ನಿನ್ನ ನಡುವನ್ನು ಕಟ್ಟಿ ಕೊಂಡು ನಾನು ತಿಂದು ಕುಡಿಯುವ ತನಕ ನನ್ನ ಸೇವೆ ಮಾಡು; ತರುವಾಯ ನೀನು ತಿಂದು ಕುಡಿ ಎಂದು ಅವನಿಗೆ ಹೇಳುವದಿಲ್ಲವೇ?

ಸಂದರ್ಭದೊಂದಿಗೆ ಓದಿ · ಲೂಕನು 17

6ಕರ್ತನು ಅವರಿಗೆ-- ನಿಮಗೆ ಸಾಸಿವೆ ಕಾಳಿನಷ್ಟು ನಂಬಿಕೆ ಇರುವದಾದರೆ ನೀವು ಈ ಆಲದ ಮರಕ್ಕೆ--ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ ಎಂದು ಹೇಳುವದಾದರೆ ಅದು ನಿಮಗೆ ವಿಧೇಯ ವಾಗುವದು.

7ಆದರೆ ನಿಮ್ಮಲ್ಲಿ ಒಬ್ಬನಿಗೆ ಉಳುವ ಇಲ್ಲವೆ ದನಕರು ಕಾಯುವ ಆಳಿರಲಾಗಿ ಅವನು ಹೊಲದಿಂದ ಬಂದಾ ಗಲೇ ಅವನಿಗೆ--ಹೋಗಿ ಊಟಕ್ಕೆ ಕೂತುಕೋ ಎಂದು ಹೇಳುವದುಂಟೇ?

8ಹಾಗೆ ಹೇಳದೆ--ನಾನು ಊಟ ಮಾಡುವಂತೆ ನೀನು ನಿನ್ನ ನಡುವನ್ನು ಕಟ್ಟಿ ಕೊಂಡು ನಾನು ತಿಂದು ಕುಡಿಯುವ ತನಕ ನನ್ನ ಸೇವೆ ಮಾಡು; ತರುವಾಯ ನೀನು ತಿಂದು ಕುಡಿ ಎಂದು ಅವನಿಗೆ ಹೇಳುವದಿಲ್ಲವೇ?

9ತನಗೆ ಅಪ್ಪಣೆ ಕೊಟ್ಟವುಗಳನ್ನು ಆ ಆಳು ಮಾಡಿದರೆ (ಯಜಮಾ ನನು) ಅವನಿಗೆ ಕೃತಜ್ಞತೆಯುಳ್ಳವನಾಗಿರುವನೋ? ನಾನು ನೆನಸುವದಿಲ್ಲ.

10ಅದೇ ರೀತಿಯಾಗಿ ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ-- ನಾವು ನಿಷ್ಪ್ರಯೋಜಕರಾದ ಆಳುಗಳು; ಯಾಕಂದರೆ ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ ಎಂದು ನೀವು ಅನ್ನಿರಿ ಎಂದು ಹೇಳಿದನು.

ಲೂಕನು 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी