ಆದಿಕಾಂಡ 42:37

ರೂಬೇನನು ತನ್ನ ತಂದೆಗೆ--ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ನನ್ನ ಇಬ್ಬರು ಕುಮಾರರನ್ನು ಕೊಂದುಬಿಡು. ನೀನು ಅವನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರಿಗಿ ತರುವೆನು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 42

35ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ ಇಗೋ, ಅವನವನ ಹಣದ ಗಂಟು ಅವನವನ ಚೀಲದಲ್ಲಿ ಇತ್ತು. ಅವರೂ ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.

36ಆಗ ಅವರ ತಂದೆಯಾದ ಯಾಕೋಬನು ಅವರಿಗೆ--ನನ್ನನ್ನು ಮಕ್ಕಳಿಲ್ಲದವ ನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾವಿಾನನ್ನೂ ಕರಕೊಂಡು ಹೋಗುವದಕ್ಕಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ ಅಂದನು.

37ರೂಬೇನನು ತನ್ನ ತಂದೆಗೆ--ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ ನನ್ನ ಇಬ್ಬರು ಕುಮಾರರನ್ನು ಕೊಂದುಬಿಡು. ನೀನು ಅವನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರಿಗಿ ತರುವೆನು ಅಂದನು.

38ಆದರೆ ಅವನು--ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಅವನ ಅಣ್ಣನು ಸತ್ತುಹೋಗಿ ಅವನೊಬ್ಬನೇ ಉಳಿದಿದ್ದಾನೆ; ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ ಮುದಿ ಪ್ರಾಯದಲ್ಲಿ ನನ್ನನ್ನು ದುಃಖದಿಂದ ಸಮಾಧಿಗೆ ಹೋಗುವಂತೆ ಮಾಡುವಿರಿ ಅಂದನು.

ಆದಿಕಾಂಡ 42 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी