ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು.
4ಓ ಮನು ಷ್ಯರೇ, ನಿಮ್ಮನ್ನೇ ನಾನು ಕರೆಯುತ್ತೇನೆ; ಮನುಷ್ಯ ಪುತ್ರರಿಗೆ ನನ್ನ ಸ್ವರವು ಇರುತ್ತದೆ.
5ಓ ಜ್ಞಾನಹೀನರೇ, ಜ್ಞಾನವನ್ನು ಗ್ರಹಿಸಿರಿ; ಬುದ್ಧಿಹೀನರೇ, ನೀವು ತಿಳು ವಳಿಕೆಯ ಹೃದಯದವರಾಗಿರ್ರಿ.
6ಕೇಳಿರಿ, ಉತ್ಕ್ರಷ್ಟ ವಾದ ಸಂಗತಿಗಳನ್ನು ನಾನು ಮಾತಾಡುವೆನು; ನ್ಯಾಯ ವಾದ ಸಂಗತಿಗಳಿಗಾಗಿ ನನ್ನ ತುಟಿಗಳನ್ನು ತೆರೆಯು ವೆನು.
7ನನ್ನ ಬಾಯಿಯು ಸತ್ಯವನ್ನು ಮಾತಾಡುವದು; ನನ್ನ ತುಟಿಗಳಿಗೆ ಕೆಟ್ಟತನವು ಅಸಹ್ಯವಾಗಿದೆ.
8ನನ್ನ ಬಾಯಿಯ ಮಾತುಗಳೆಲ್ಲಾ ನೀತಿಯಲ್ಲಿವೆ; ಮೂರ್ಖ ತನವಾಗಲಿ ವಕ್ರತೆಯಾಗಲಿ ಅವುಗಳಲ್ಲಿ ಇಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ