೧ ಪೂರ್ವಕಾಲವೃತ್ತಾಂತ 28:11

ಆಗ ದಾವೀದನು ತನ್ನ ಮಗನಾದ ಸೊಲೊ ಮೋನನಿಗೆ -- ದ್ವಾರಾಂಗಳದ ಮಾದರಿಯನ್ನೂ ಅದರ ಮನೆಗಳು, ಉಗ್ರಾಣಗಳು, ಮೇಲಿನ ಕೊಠಡಿ ಗಳು, ಅಂತರಂಗದ ಕೊಠಡಿಗಳು, ಕೃಪಾಸನದ ಸ್ಥಾನವು,

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 28

9ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು.

10ಆದದರಿಂದ ಜಾಗ್ರತೆಯಾಗಿರು; ಯಾಕಂದರೆ ಕರ್ತನು ಪರಿಶುದ್ಧ ಸ್ಥಾನಕ್ಕೋಸ್ಕರ ಮನೆಯನ್ನು ಕಟ್ಟಿಸು ವದಕ್ಕೆ ನಿನ್ನನ್ನು ಆದುಕೊಂಡಿದ್ದಾನೆ; ನೀನು ದೃಢವಾ ಗಿದ್ದು ಅದನ್ನು ಮಾಡು ಅಂದನು.

11ಆಗ ದಾವೀದನು ತನ್ನ ಮಗನಾದ ಸೊಲೊ ಮೋನನಿಗೆ -- ದ್ವಾರಾಂಗಳದ ಮಾದರಿಯನ್ನೂ ಅದರ ಮನೆಗಳು, ಉಗ್ರಾಣಗಳು, ಮೇಲಿನ ಕೊಠಡಿ ಗಳು, ಅಂತರಂಗದ ಕೊಠಡಿಗಳು, ಕೃಪಾಸನದ ಸ್ಥಾನವು,

12ಕರ್ತನ ಮನೆಯ ಅಂಗಳಗಳು, ಸುತ್ತಲಿ ರುವ ಕೊಠಡಿಗಳಾದ ಕರ್ತನ ಮನೆಯ ಉಗ್ರಾಣ ಗಳು, ಪ್ರತಿಷ್ಠೆ ಮಾಡಿದವುಗಳ ಉಗ್ರಾಣಗಳು, ಆತ್ಮ ದಿಂದ ತನಗುಂಟಾದ ಇವುಗಳ ಸಮಸ್ತ ಮಾದರಿ ಯನ್ನೂ ಕೊಟ್ಟನು.

13ಇದಲ್ಲದೆ ಯಾಜಕರ ಲೇವಿ ಯರ ವರ್ಗಗಳಿಗೋಸ್ಕರವೂ ಕರ್ತನ ಮನೆಯ ಸೇವೆಯ ಸಮಸ್ತ ಕೆಲಸಕ್ಕೋಸ್ಕರವೂ ಕರ್ತನ ಮನೆ ಯಲ್ಲಿರುವ ಸೇವೆಮಾಡುವ ಸಮಸ್ತ ಪಾತ್ರೆಗಳಿ ಗೋಸ್ಕರವೂ ಕಟ್ಟಳೆ ಕೊಟ್ಟನು.

೧ ಪೂರ್ವಕಾಲವೃತ್ತಾಂತ 28 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी