ಯೆಹೆಜ್ಕೇಲನು 29:2

ಮನುಷ್ಯಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖ ಮಾಡಿ ಅವನಿಗೂ ಸಮಸ್ತ ಐಗುಪ್ತಕ್ಕೂ ವಿರೋಧವಾಗಿ ಪ್ರವಾದಿಸು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 29

1ಹತ್ತನೇ ವರುಷದ ಹತ್ತನೇ ತಿಂಗಳಿನ, ಹನ್ನೆರಡನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಹೇಳಿದ್ದೇನಂದರೆ--

2ಮನುಷ್ಯಪುತ್ರನೇ, ನೀನು ಐಗುಪ್ತದ ಅರಸನಾದ ಫರೋಹನ ಕಡೆಗೆ ಮುಖ ಮಾಡಿ ಅವನಿಗೂ ಸಮಸ್ತ ಐಗುಪ್ತಕ್ಕೂ ವಿರೋಧವಾಗಿ ಪ್ರವಾದಿಸು.

3ನೀನು ಮಾತನಾಡಿ ಹೇಳಬೇಕಾದ ದ್ದೇನಂದರೆ--ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಐಗುಪ್ತದ ಅರಸನಾದ ಫರೋಹನೇ, ತನ್ನ ನದಿಗಳ ಮಧ್ಯದಲ್ಲಿ ಮಲಗಿಕೊಂಡು--ಈ ನದಿ ನನ್ನದು, ನಾನೇ ಅದನ್ನು ನನಗೋಸ್ಕರ ಮಾಡಿ ಕೊಂಡಿದ್ದೇನೆಂದು ಹೇಳಿಕೊಂಡ ದೊಡ್ಡ ಘಟ ಸರ್ಪವೇ, ಇಗೋ, ನಾನು ನಿನಗೆ ವಿರುದ್ಧವಾಗಿದ್ದೇನೆ.

4ಆದರೆ ನಿನ್ನ ದವಡೆಗಳಲ್ಲಿ ಗಾಳಗಳನ್ನು ಹಾಕಿ, ನದಿಗಳ ವಿಾನುಗಳನ್ನು ಬೆನ್ನು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡಿ ನಿನ್ನನ್ನು ನಿನ್ನ ನದಿಗಳೊಳಗಿಂದ ಮೇಲೆ ಎಳೆದು ನಿನ್ನ ವಿಾನುಗಳು ಚಿಪ್ಪುಗಳಿಗೆ ಅಂಟಿಕೊಳ್ಳುವಂತೆ ಮಾಡುವೆನು. ನಿನ್ನನ್ನೂ ನಿನ್ನ ನದಿಗಳ ವಿಾನುಗಳನ್ನೂ ಅರಣ್ಯದಲ್ಲಿ ಹಾಕುವೆನು; ನೀನು ಬಯಲುಗಳ ಮೇಲೆ ಬಿದ್ದಿರುವಿ; ನಿನ್ನನ್ನು ಯಾರೂ ಒಟ್ಟುಗೂಡಿಸುವದು ಇಲ್ಲ, ಸೇರಿಸುವದೂ ಇಲ್ಲ.

ಯೆಹೆಜ್ಕೇಲನು 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी