೨ ಸಮುವೇಲನು 20:12

ಆದರೆ ಅಮಾಸನು ರಾಜ ಮಾರ್ಗದ ಮಧ್ಯದಲ್ಲಿ ರಕ್ತದೊಳಗೆ ಹೊರಳಾಡುತ್ತಾ ಇದ್ದನು. ಜನರೆಲ್ಲರು ನಿಂತಿರುವದನ್ನು ಆ ಮನುಷ್ಯನು ಕಂಡಾಗ ಅವನು ಅಮಾಸನನ್ನು ದಾರಿಯಿಂದ ಹೊಲಕ್ಕೆ ಎಳೆದು ಅವನ ಮೇಲೆ ಒಂದು ವಸ್ತ್ರವನ್ನು ಹಾಕಿದನು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 20

10ಎರಡನೇ ಸಾರಿ ಹೊಡೆಯಲಿಲ್ಲ, ಅವನು ಸತ್ತನು. ಯೋವಾಬನೂ ಅವನ ಸಹೋದರನಾದ ಅಬೀಷೈಯೂ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟಿದರು.

11ಯೋವಾಬನ ಜನರಲ್ಲಿ ಒಬ್ಬನು ಸತ್ತವನ ಬಳಿಯಲ್ಲಿ ನಿಂತು--ಯಾವನು ಯೋವಾಬನ ಮೇಲೆ ಇಷ್ಟವುಳ್ಳವನೋ ಯಾವನು ದಾವೀದನಿಗೆ ಹೊಂದಿದವನೋ ಅವನು ಯೋವಾಬನ ಹಿಂದೆ ಹೋಗಲಿ ಅಂದನು.

12ಆದರೆ ಅಮಾಸನು ರಾಜ ಮಾರ್ಗದ ಮಧ್ಯದಲ್ಲಿ ರಕ್ತದೊಳಗೆ ಹೊರಳಾಡುತ್ತಾ ಇದ್ದನು. ಜನರೆಲ್ಲರು ನಿಂತಿರುವದನ್ನು ಆ ಮನುಷ್ಯನು ಕಂಡಾಗ ಅವನು ಅಮಾಸನನ್ನು ದಾರಿಯಿಂದ ಹೊಲಕ್ಕೆ ಎಳೆದು ಅವನ ಮೇಲೆ ಒಂದು ವಸ್ತ್ರವನ್ನು ಹಾಕಿದನು.

13ಅವನು ರಾಜ ಮಾರ್ಗ ದಿಂದ ಎಳೆದು ಹಾಕಲ್ಪಟ್ಟ ತರುವಾಯ ಜನರೆಲ್ಲರೂ ಮುಂದಕ್ಕೆ ಹೋಗಿ ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟಿ ಯೋವಾಬನ ಹಿಂದೆ ಹೋದರು.

14ಅವನು ಇಸ್ರಾಯೇಲಿನ ಎಲ್ಲಾ ಗೋತ್ರಗಳಲ್ಲಿ ಹಾದು ಆಬೇಲ್ಬೇತ್ಮಾಕಾ ಮಟ್ಟಿಗೂ ಎಲ್ಲಾ ಬೇರಿಯ ಬಳಿಗೂ ಹೋದನು. ಆಗ ಅವರು ಕೂಡಿಕೊಂಡು ಅವನ ಸಂಗಡ ಹೋದರು.

೨ ಸಮುವೇಲನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी