ಜೆಕರ್ಯ 7:13

ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಸಂದರ್ಭದೊಂದಿಗೆ ಓದಿ · ಜೆಕರ್ಯ 7

11ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು.

12ಹೌದು, ಅವರು ನ್ಯಾಯಪ್ರಮಾಣ ವನ್ನೂ ಸೈನ್ಯಗಳ ಕರ್ತನು ತನ್ನ ಆತ್ಮದ ಮುಖಾಂತರ ಪೂರ್ವದ ಪ್ರವಾದಿಗಳ ಕೈಯಿಂದ ಕಳುಹಿಸಿದ ವಾಕ್ಯ ಗಳನ್ನೂ ಕೇಳದ ಹಾಗೆ ತಮ್ಮ ಹೃದಯಗಳನ್ನು ವಜ್ರದ ಕಲ್ಲಿನಂತೆ ಮಾಡಿಕೊಂಡರು. ಆದದರಿಂದ ಸೈನ್ಯಗಳ ಕರ್ತನಿಂದ ಮಹಾರೋಷವು ಬಂತು.

13ಆಗ ಆದದ್ದೇ ನಂದರೆ--ಅವನು ಕೂಗಲು ಅವರು ಕೇಳದೆ ಇದ್ದ ಪ್ರಕಾರ ಅವರು ಕೂಗಲು ನಾನು ಕೇಳದೆ ಇದ್ದೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.

14ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.

ಜೆಕರ್ಯ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी