ನಿನ್ನ ಪತ್ನಿಯರೂ ನಿನ್ನ ಸೌಂದರ್ಯರಾದ ವರೆಲ್ಲರೂ ನನ್ನವರೆಂದು ಬೆನ್ಹದದನು ಹೇಳುತ್ತಾ ನೆಂಬದಾಗಿ ಅವನಿಗೆ ಹೇಳಿದನು.
1ಅರಾಮಿನ ಅರಸನಾದ ಬೆನ್ಹದದನು ತನ್ನ ಸೈನ್ಯವನ್ನೆಲ್ಲಾ ಕೂಡಿಸಿದನು. ಅವನ ಬಳಿ ಯಲ್ಲಿ ಕುದುರೆಗಳೂ ರಥಗಳೂ ಸಹಿತವಾಗಿ ಮೂವತ್ತೆರಡು ಮಂದಿ ಅರಸುಗಳಿದ್ದರು. ಅವನು ಏರಿ ಹೋಗಿ ಸಮಾರ್ಯವನ್ನು ಮುತ್ತಿಗೆ ಹಾಕಿ ಅದರ ಮೇಲೆ ಯುದ್ಧಮಾಡಿದನು.
2ಅವನು ಇಸ್ರಾಯೇಲಿನ ಅರಸನಾದ ಅಹಾಬನ ಬಳಿಗೆ ದೂತರನ್ನು ಪಟ್ಟಣ ದೊಳಗೆ ಕಳುಹಿಸಿ--ನಿನ್ನ ಬೆಳ್ಳಿಯೂ ನಿನ್ನ ಬಂಗಾರವೂ ನನ್ನವು;
3ನಿನ್ನ ಪತ್ನಿಯರೂ ನಿನ್ನ ಸೌಂದರ್ಯರಾದ ವರೆಲ್ಲರೂ ನನ್ನವರೆಂದು ಬೆನ್ಹದದನು ಹೇಳುತ್ತಾ ನೆಂಬದಾಗಿ ಅವನಿಗೆ ಹೇಳಿದನು.
4ಇಸ್ರಾಯೇಲಿನ ಅರಸನು ಪ್ರತ್ತ್ಯುತ್ತರವಾಗಿ--ಅರಸನಾದ ನನ್ನ ಒಡೆ ಯನೇ, ನಿನ್ನ ಮಾತಿನ ಹಾಗೆಯೇ ನಾನು ನಿನ್ನವನು; ನನ್ನದೆಲ್ಲವೂ ನಿನ್ನದು ಅಂದನು.
5ಆ ದೂತರು ತಿರಿಗಿ ಬಂದು ಅವನಿಗೆ--ಒಡೆಯನೇ, ಬೆನ್ಹದದನು ಹೇಳುವ ದೇನಂದರೆ--ನಿನ್ನ ಬೆಳ್ಳಿಯನ್ನೂ ಬಂಗಾರವನ್ನೂ ನಿನ್ನ ಸ್ತ್ರೀಯರನ್ನೂ ಮಕ್ಕಳನ್ನೂ ನನಗೆ ಒಪ್ಪಿಸಬೇಕೆಂದು ನಿನಗೆ ಹೇಳಿ ಕಳುಹಿಸಿದೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ