ಪ್ರಸಂಗಿ 9:10

ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.

ಸಂದರ್ಭದೊಂದಿಗೆ ಓದಿ · ಪ್ರಸಂಗಿ 9

8ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ. ನಿನ್ನ ತಲೆಯಲ್ಲಿ ಎಣ್ಣೆಯು ಕಡಿಮೆ ಯಾಗದಿರಲಿ.

9ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.

10ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಶಕ್ತಿಯಿಂದ ಮಾಡು; ನೀನು ಹೋಗಲಿರುವ ಸಮಾಧಿಯಲ್ಲಿ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.

11ನಾನು ತಿರುಗಿಕೊಂಡು ಸೂರ್ಯನ ಕೆಳಗೆ ನೋಡಿದ್ದೇನಂದರೆ, ವೇಗಿಗಳಿಗೆ ಓಟವೂ ಪರಾಕ್ರಮ ಶಾಲಿಗಳಿಗೆ ಯುದ್ಧವೂ ಜ್ಞಾನಿಗಳಿಗೆ ರೊಟ್ಟಿಯೂ ವಿವೇಕಿಗಳಿಗೆ ಐಶ್ವರ್ಯವೂ ಪ್ರವೀಣರಿಗೆ ದಯೆಯೂ ಸಿಗುವದಿಲ್ಲ. ಕಾಲವೂ ಗತಿಯೂ ಅವರೆಲ್ಲರಿಗೆ ಸಂಭವಿ ಸುತ್ತವೆ.

12ಮನುಷ್ಯನು ಸಹ ತನ್ನ ಕಾಲವನ್ನು ತಿಳಿದಲ್ಲಿ ಬಾಧೆಯನ್ನುಂಟುಮಾಡುವ ಬಲೆಯಿಂದ ಹಿಡಿಯುವ ವಿಾನಿನಂತೆಯೂ ಉರುಲಿನಲ್ಲಿ ಸಿಕ್ಕುವ ಪಕ್ಷಿಗ ಳಂತೆಯೂ ಮನುಷ್ಯನ ಮಕ್ಕಳ ಮೇಲೆ ಕೇಡಿನ ಕಾಲವು ತಕ್ಷಣ ಬೀಳುವಾಗ ಹಿಡಿಯಲ್ಪಡುತ್ತಾರೆ.

ಪ್ರಸಂಗಿ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी