೨ ಅರಸುಗಳು 9:19

ಆಗ ಬೇರೆ ರಾಹುತನನ್ನು ಕಳುಹಿಸಿದನು. ಇವನು ಅವರ ಬಳಿಗೆ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು--ನನ್ನ ಹಿಂದಕ್ಕೆ ಹೋಗು ಅಂದನು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 9

17ಇಜ್ರೇಲಿನ ಬುರುಜಿನ ಮೇಲೆ ಕಾವಲು ಗಾರನು ನಿಂತಿದ್ದನು. ಇವನು ಬರುವ ಯೇಹುವಿನ ಗುಂಪನ್ನು ಕಂಡು--ನಾನು ಗುಂಪನ್ನು ನೋಡುತ್ತೇನೆ ಅಂದನು. ಅದಕ್ಕೆ ಯೋರಾಮನು ರಾಹುತನನ್ನು ಕರೆದು ಅವರಿಗೆ ಎದುರಾಗಿ ಕಳುಹಿಸಿ--ಸಮಾಧಾ ನವೋ ಎಂದು ಕೇಳಲಿ ಅಂದನು.

18ಆದದರಿಂದ ಒಬ್ಬನು ಕುದುರೆಯನ್ನು ಹತ್ತಿ ಅವನಿಗೆ ಎದುರಾಗಿ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು? ನನ್ನ ಹಿಂದಕ್ಕೆ ಹೋಗು ಅಂದನು. ಆಗ ಕಾವಲುಗಾರನು -- ಸೇವಕನು ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ ಅಂದನು.

19ಆಗ ಬೇರೆ ರಾಹುತನನ್ನು ಕಳುಹಿಸಿದನು. ಇವನು ಅವರ ಬಳಿಗೆ ಹೋಗಿ--ಸಮಾಧಾನವೋ ಎಂದು ಅರಸನು ಕೇಳು ತ್ತಾನೆ ಅಂದನು. ಅದಕ್ಕೆ ಯೇಹುವು--ಸಮಾಧಾನ ನಿನಗೆ ಏನು--ನನ್ನ ಹಿಂದಕ್ಕೆ ಹೋಗು ಅಂದನು.

20ಆಗ ಕಾವಲುಗಾರನು--ಇವನೂ ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ. ಇದಲ್ಲದೆ ಓಡಿಸುವದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ; ಯಾಕಂದರೆ ಅವನು ಹುಚ್ಚುತನವಾಗಿ ಓಡಿಸುತ್ತಾನೆ ಅಂದನು.

21ಯೋರಾಮನು ರಥಹೂಡಬೇಕೆಂದು ಹೇಳಿದನು. ಅವನ ರಥವು ಸಿದ್ಧವಾಯಿತು. ಆಗ ಇಸ್ರಾಯೇಲಿನ ಅರಸನಾದ ಯೋರಾಮನೂ ಯೆಹೂ ದದ ಅರಸನಾದ ಅಹಜ್ಯನೂ ಹೊರಟು ಅವನವನು ತನ್ನ ತನ್ನ ರಥದಲ್ಲಿ ಏರಿ ಯೇಹುವಿಗೆ ಎದುರಾಗಿ ಹೊರಟು ಇಜ್ರೇಲ್ಯನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.

೨ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी