ಯೆಹೆಜ್ಕೇಲನು 45:2

ಇಲ್ಲಿ ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವದು, ಉಪನಗರಕ್ಕಾಗಿ ಅಲ್ಲಿ ಸುತ್ತಲೂ ಐವತ್ತು ಮೊಳ ಇರುವದು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 45

1ಇದಲ್ಲದೆ ನೀವು ದೇಶವನ್ನು ಚೀಟುಹಾಕಿಸ್ವಾಸ್ತ್ಯವಾಗಿ ಹಂಚುವಾಗ, ಒಂದು ಪರಿಶುದ್ಧ ಭಾಗವನ್ನು ಪ್ರತ್ಯೇಕಿಸಿ, ಕರ್ತನಿಗೆ ಕಾಣಿಕೆಯಾಗಿ ಕೊಡಬೇಕು; ಅದು ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರಲಿ, ಇದು ಅದರ ಎಲ್ಲಾ ಮೇರೆಗಳಲ್ಲಿ ಸುತ್ತಲಾಗಿ ಪರಿಶುದ್ಧವಾಗಿರಲಿ.

2ಇಲ್ಲಿ ಈ ಪರಿಶುದ್ಧ ಸ್ಥಳಕ್ಕಾಗಿ ಐನೂರು ಮೊಳ ಉದ್ದದ, ಐನೂರು ಮೊಳ ಅಗಲದ ಚಚ್ಚೌಕವಾಗಿರುವದು, ಉಪನಗರಕ್ಕಾಗಿ ಅಲ್ಲಿ ಸುತ್ತಲೂ ಐವತ್ತು ಮೊಳ ಇರುವದು.

3ಈ ಅಳತೆಯು, ಇಪ್ಪತ್ತೈದು ಸಾವಿರ ಮೊಳ ಉದ್ದವಾಗಿಯೂ ಹತ್ತು ಸಾವಿರ ಮೊಳ ಅಗಲವಾಗಿಯೂ ಇರುವಂತೆ ನೀನು ಅಳೆಯಬೇಕು ಪರಿಶುದ್ಧ ಸ್ಥಳವೂ ಅತಿ ಶುದ್ಧವಾದದ್ದೂ ಇರಬೇಕು; ಪರಿಶುದ್ಧವಾದ ಜಾಗವೂ ಆಗಿರಬೇಕು.

4ದೇಶದ ಪರಿಶುದ್ಧ ಭಾಗವು ಕರ್ತನಿಗೆ ಸೇವೆ ಮಾಡಲು ಸವಿಾಪಿ ಸುವಂತ, ಪರಿಶುದ್ಧ ಸ್ಥಳದ ಸೇವಕರಾದಂತ ಯಾಜಕರ ದಾಗಿರಬೇಕು; ಅದು ಅವರ ಮನೆಗಳಿಗೆ ಸ್ಥಳವಾಗಿಯೂ ಪರಿಶುದ್ಧ ಸ್ಥಳಕ್ಕೆ ಪರಿಶುದ್ಧ ಜಾಗವಾಗಿಯೂ ಇರಬೇಕು.

ಯೆಹೆಜ್ಕೇಲನು 45 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी