ಪ್ರಕಟನೆ 3:6

ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.

ಸಂದರ್ಭದೊಂದಿಗೆ ಓದಿ · ಪ್ರಕಟನೆ 3

4ತಮ್ಮ ವಸ್ತ್ರಗಳನ್ನು ಮಲಿನಮಾಡಿ ಕೊಳ್ಳದಿರುವ ಕೆಲವರು ಸಾರ್ದಿಸಿನಲ್ಲಿ ಸಹ ನಿನ್ನಲ್ಲಿ ದ್ದಾರೆ. ಅವರು ಬಿಳೀ ವಸ್ತ್ರಗಳನ್ನು ಧರಿಸಿಕೊಂಡು ನನ್ನೊಂದಿಗೆ ನಡೆಯುವರು. ಯಾಕಂದರೆ ಅವರು ಯೋಗ್ಯರಾಗಿದ್ದಾರೆ.

5ಜಯಹೊಂದುವ ಇವನೇ ಬಿಳೀ ವಸ್ತ್ರದಿಂದ ಹೊದಿಸಲ್ಪಡುವನು; ಜೀವದ ಪುಸ್ತಕದಿಂದ ನಾನು ಅವನ ಹೆಸರನ್ನು ಅಳಿಸಿ ಬಿಡುವದೇ ಇಲ್ಲ, ಆದರೆ ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಅವನ ಹೆಸರನ್ನು ಒಪ್ಪಿಕೊಳ್ಳುವೆನು.

6ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.

7ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯು ವಾತನೂ ಯಾರು ತೆರೆಯದಂತೆ ಮುಚ್ಚುವಾತನೂ ಆಗಿರುವವನು ಹೇಳುವಂಥವುಗಳೇನಂದರೆ,

8ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ಇಗೋ, ನಾನು ನಿನ್ನ ಮುಂದೆ ಒಂದು ಬಾಗಲನ್ನು ತೆರೆದಿದ್ದೇನೆ, ಅದನ್ನು ಯಾವ ಮನುಷ್ಯನೂ ಮುಚ್ಚಲಾರನು; ಯಾಕಂದರೆ ನಿನ್ನ ಶಕ್ತಿ ಕೊಂಚವಾಗಿದ್ದರೂ ನನ್ನ ವಾಕ್ಯವನ್ನು ಕಾಪಾಡಿ ನನ್ನ ಹೆಸರನ್ನು ಅಲ್ಲಗಳೆಯಲಿಲ್ಲ.

ಪ್ರಕಟನೆ 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी