ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗ ಗಳಿಗೂ ಆಹಾರವಾಗುವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.
31ಹಿನ್ನೋಮನ ಮಗನ ತಗ್ಗಿನಲ್ಲಿರುವ ತೋಫೆತಿನ ಉನ್ನತ ಸ್ಥಳಗಳನ್ನು ತಮ್ಮ ಕುಮಾರ ಕುಮಾರ್ತೆಯರನ್ನು ಬೆಂಕಿಯಲ್ಲಿ ಸುಡುವದಕ್ಕೆ ಕಟ್ಟಿದ್ದಾರೆ; ಇದನ್ನು ನಾನು ಆಜ್ಞಾಪಿಸಲಿಲ್ಲ, ಇಲ್ಲವೆ ಅದು ನನ್ನ ಮನಸ್ಸಿನಲ್ಲಿ ಬರಲಿಲ್ಲ.
32ಆದದರಿಂದ ಕರ್ತನು ಅನ್ನುವದೇನಂದರೆ--ಇಗೋ, ದಿನಗಳು ಬರುವವು; ಆಗ ಅದು ಇನ್ನು ತೋಫೆತೆಂದೂ ಹಿನ್ನೋಮನ ಮಗನ ತಗ್ಗು ಎಂದೂ ಕರೆಯಲ್ಪಡುವದೇ ಇಲ್ಲ; ಆದರೆ ಕೊಲೆಯ ತಗ್ಗು ಎಂದು ಅದಕ್ಕೆ ಹೆಸರಾಗುವದು. ಯಾಕಂದರೆ ಸ್ಥಳವಿಲ್ಲದ ವರೆಗೂ ತೋಫೆತಿನಲ್ಲಿ ಅವರು ಹೂಣಿಡುವರು.
33ಈ ಜನರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗ ಗಳಿಗೂ ಆಹಾರವಾಗುವವು; ಯಾರೂ ಅವುಗಳನ್ನು ಬೆದರಿಸುವದಿಲ್ಲ.
34ಆಗ ನಾನು ಯೆಹೂದದ ಪಟ್ಟಣ ಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಮದಲಗಿತ್ತಿಯ ಸ್ವರವನ್ನೂ ನಿಲ್ಲಿಸುವೆನು; ಯಾಕಂದರೆ ದೇಶವು ಹಾಳಾಗುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ