೧ ಪೂರ್ವಕಾಲವೃತ್ತಾಂತ 21:9

ಆಗ ಕರ್ತನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನಂದರೆ --

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 21

7ಇದಲ್ಲದೆ ಈ ಕಾರ್ಯವು ದೇವರ ಸಮ್ಮುಖದಲ್ಲಿ ಕೆಟ್ಟದಾದ್ದರಿಂದ ಆತನು ಇಸ್ರಾಯೇಲ್ಯರನ್ನು ಬಾಧಿಸಿ ದನು.

8ಆಗ ದಾವೀದನು ದೇವರಿಗೆ--ನಾನು ಈ ಕಾರ್ಯ ಮಾಡಿದ್ದರಿಂದ ಮಹಾಪಾಪಿಯಾಗಿದ್ದೇನೆ; ಆದರೆ ನೀನು ದಯದಿಂದ ನಿನ್ನ ಸೇವಕನ ಅಕ್ರಮವನ್ನು ಪರಿಹರಿಸು; ನಾನು ಇದರಲ್ಲಿ ಬುದ್ಧಿಹೀನವಾಗಿ ನಡೆ ದೆನು ಅಂದನು.

9ಆಗ ಕರ್ತನು ದಾವೀದನ ದರ್ಶಿಯಾದ ಗಾದನಿಗೆ ಹೇಳಿದ್ದೇನಂದರೆ --

10ನೀನು ದಾವೀದನ ಬಳಿಗೆ ಹೋಗಿ ಅವನ ಸಂಗಡ ಮಾತ ನಾಡಿ--ಕರ್ತನು ಹೀಗೆ ಹೇಳುತ್ತಾನೆ, ಮೂರು ಕಾರ್ಯ ಗಳನ್ನು ನಿನ್ನ ಮುಂದೆ ಇಡುತ್ತೇನೆ; ನಾನು ನಿನಗೆ ಮಾಡುವ ಹಾಗೆ ಅವುಗಳಲ್ಲಿ ಒಂದನ್ನು ಆರಿಸಿಕೋ ಎಂದು ಹೇಳು.

11ಹಾಗೆಯೇ ಗಾದನು ದಾವೀದನ ಬಳಿಗೆ ಬಂದು ಅವನಿಗೆ--ಕರ್ತನು ಹೀಗೆ ಹೇಳುತ್ತಾನೆ, ಮೂರು ವರುಷಗಳ ಬರವನ್ನಾದರೂ ಇಲ್ಲವೆ ನಿನ್ನ ಶತ್ರುಗಳ ಕತ್ತಿಯು ಹತ್ತಿಕೊಳ್ಳಲಾಗಿ ಮೂರು ತಿಂಗಳು ನಿನ್ನ ವೈರಿಗಳ ಮುಂದೆ ನಾಶಹೊಂದುವದನ್ನಾದರೂ ಇಲ್ಲವೆ ಕರ್ತನ ದೂತನು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿಯೂ ದೇಶದಲ್ಲಿಯೂ ಕರ್ತನ ಕತ್ತಿ ಎಂಬುವ ವ್ಯಾಧಿಯಿಂದ ನಾಶವಾಗುವದನ್ನಾದರೂ ನೀನು ಆರಿಸಿಕೋ.

೧ ಪೂರ್ವಕಾಲವೃತ್ತಾಂತ 21 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी