ಆದಕಾರಣ ಆ ಕೊಠಡಿಯೊಳಗಿಂದ ಟೋಬೀಯನ ಪಾತ್ರೆಗಳ ನ್ನೆಲ್ಲಾ ಹೊರಗೆ ಹಾಕಿಸಿದೆನು.
6ಆದರೆ ಇಷ್ಟು ಕಾಲಕ್ಕೆ ನಾನು ಯೆರೂಸಲೇಮಿನಲ್ಲಿ ಇರಲಿಲ್ಲ; ಬಾಬೆಲಿನ ಅರಸನಾದ ಅರ್ತಷಸ್ತನ ಮೂವ ತ್ತೆರಡನೇ ವರುಷದಲ್ಲಿ, ನಾನು ಅರಸನ ಬಳಿಗೆ ಬಂದು ಸ್ವಲ್ಪಕಾಲದ ತರುವಾಯ ನಾನು ಅರಸನಿಂದ ಅಪ್ಪಣೆ ಯನ್ನು ತೆಗೆದುಕೊಂಡು
7ನಾನು ಯೆರೂಸಲೇಮಿಗೆ ಬಂದು ಎಲ್ಯಾಷೀಬನು ಟೋಬೀಯನಿಗೋಸ್ಕರ ದೇವರ ಆಲಯದ ಅಂಗಳಗಳಲ್ಲಿ ಒಂದು ಕೊಠಡಿ ಯನ್ನು ಸಿದ್ಧಮಾಡಿದ್ದ ಕೇಡನ್ನು ನಾನು ತಿಳುಕೊಂಡಾಗ ಅದು ನನಗೆ ಬಹಳ ವ್ಯಸನಕರವಾಗಿತ್ತು.
8ಆದಕಾರಣ ಆ ಕೊಠಡಿಯೊಳಗಿಂದ ಟೋಬೀಯನ ಪಾತ್ರೆಗಳ ನ್ನೆಲ್ಲಾ ಹೊರಗೆ ಹಾಕಿಸಿದೆನು.
9ಆಗ ನಾನು ಹೇಳಿದ್ದ ರಿಂದ ಅವರು ಕೊಠಡಿಗಳನ್ನು ಶುಚಿಮಾಡಿದರು. ತರುವಾಯ ದೇವರ ಆಲಯದ ಸಾಮಾನುಗಳನ್ನೂ ಅಪಾರ ಸಮರ್ಪಣೆಗಳನ್ನೂ ಧೂಪವರ್ಗವನ್ನೂ ತಿರಿಗಿ ಅಲ್ಲಿಗೆ ತಂದು ಇಡಿಸಿದೆನು.
10ಲೇವಿಯರ ಪಾಲುಗಳು ಅವರಿಗೆ ಕೊಡಲಿಲ್ಲ ವೆಂದು ನನಗೆ ತಿಳಿಯಿತು. ಯಾಕಂದರೆ ಸೇವೆಯನ್ನು ಮಾಡುವ ಲೇವಿಯರೂ ಹಾಡುಗಾರರೂ ತಮ್ಮ ತಮ್ಮ ಹೊಲಕ್ಕೆ ಓಡಿಹೋಗುತ್ತಿದ್ದರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ