ಅಪೊಸ್ತಲರ ಕೃತ್ಯಗಳು 4:21

ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 4

19ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ.

20ಯಾಕಂದರೆ ನಾವು ಕಂಡು ಕೇಳಿದವು ಗಳನ್ನು ಮಾತನಾಡದೆ ಇರಲಾರೆವು ಎಂದು ಹೇಳಿದರು.

21ಹೀಗೆ ಜನರ ದೆಸೆಯಿಂದ ಅವರನ್ನು ಶಿಕ್ಷಿಸುವದಕ್ಕೆ ಯಾವ ವಿಧಾನವನ್ನೂ ಕಾಣದೆ ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; ನಡೆದ ಅದ್ಭುತಕಾರ್ಯಕ್ಕಾಗಿ ಎಲ್ಲರೂ ದೇವರನ್ನು ಮಹಿಮೆಪಡಿಸಿದರು.

22ಸ್ವಸ್ಥಪಡಿಸುವ ಈ ಅದ್ಭುತಕಾರ್ಯದಿಂದ ಗುಣಹೊಂದಿದ ಆ ಮನುಷ್ಯ ನಿಗೆ ನಾಲ್ವತ್ತು ವರುಷಕ್ಕಿಂತ ಹೆಚ್ಚು ವಯಸ್ಸಾಗಿತ್ತು.

23ಅವರು ಬಿಡುಗಡೆ ಹೊಂದಿಕೊಂಡು ತಮ್ಮ ಸ್ವಂತ ಜನರ ಬಳಿಗೆ ಹೋಗಿ ಪ್ರಧಾನಯಾಜಕರೂ ಹಿರಿಯರೂ ತಮಗೆ ಹೇಳಿದ್ದೆಲ್ಲವನ್ನು ಅವರಿಗೆ ತಿಳಿಸಿದರು.

ಅಪೊಸ್ತಲರ ಕೃತ್ಯಗಳು 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी