ಪ್ರಕಟನೆ 7:10

ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು.

ಸಂದರ್ಭದೊಂದಿಗೆ ಓದಿ · ಪ್ರಕಟನೆ 7

8ಜೆಬುಲೂನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಯೋಸೇಫನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡು ಸಾವಿರ, ಬೆನ್ಯಾವಿಾನನ ಗೋತ್ರದವರಲ್ಲಿ ಮುದ್ರಿಸಲ್ಪಟ್ಟವರು ಹನ್ನೆರಡುಸಾವಿರ.

9ಇದಾದ ಮೇಲೆ ಇಗೋ, ನಾನು ನೋಡಲಾಗಿ ಸಮಸ್ತ ಜನಾಂಗ ಕುಲ ಪ್ರಜೆ ಭಾಷೆಗಳೊಳಗಿಂದ ಯಾರೂ ಎಣಿಸಲಾಗದಂತ ಮಹಾ ಸಮೂಹವು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡವರಾಗಿ ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡು ಸಿಂಹಾಸನದ ಮುಂದೆಯೂ ಕುರಿಮರಿಯಾದಾತನ ಮುಂದೆಯೂ

10ಅವರು--ರಕ್ಷಣೆಯು ಸಿಂಹಾಸನದ ಮೇಲೆ ಕೂತಿರುವ ನಮ್ಮ ದೇವರಿಗೂ ಕುರಿಮರಿಯಾದಾತನಿಗೂ ಸೇರಿದ್ದು ಎಂದು ಮಹಾ ಶಬ್ದದಿಂದ ಕೂಗಿದರು.

11ಸಿಂಹಾಸನದ, ಹಿರಿಯರ ಮತ್ತು ನಾಲ್ಕು ಜೀವಿಗಳ ಸುತ್ತಲೂ ನಿಂತುಕೊಂಡಿದ್ದ ದೂತರೆಲ್ಲರೂ ಸಿಂಹಾಸನದ ಮುಂದೆ ಬೋರಲ ಬಿದ್ದು ದೇವರನ್ನು ಆರಾಧಿಸುತ್ತಾ.--

12ಆಮೆನ್‌. ನಮ್ಮ ದೇವರಿಗೆ ಸ್ತೋತ್ರವೂ ಪ್ರಭಾವವೂ ಜ್ಞಾನವೂ ಕೃತಜ್ಞತಾಸ್ತುತಿಯೂ ಮಾನವೂ ಬಲವೂ ಸಾಮ ರ್ಥ್ಯವೂ ಯುಗಯುಗಾಂತರಗಳಲ್ಲಿ ಇರಲಿ ಎಂದು ಹೇಳಿದರು. ಆಮೆನ್‌.

ಪ್ರಕಟನೆ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी