ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ.
11ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು.
12ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು.
13ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ.
14ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ.
15ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ