ನಿನ್ನ ದೇವರಾದ ಕರ್ತನು ದಹಿಸುವ ಅಗ್ನಿಯೂ ರೋಷವುಳ್ಳ ದೇವರೂ ಆಗಿದ್ದಾನೆ.
22ಆದರೆ ನಾನು ಈ ದೇಶದಲ್ಲಿ ಸಾಯಲೇಬೇಕು. ನಾನು ಯೊರ್ದನಿನ ಆಚೆಗೆ ಹೋಗ ತಕ್ಕದ್ದಲ್ಲ, ಆದರೆ ನೀವು ಆಚೆಗೆ ಹೋಗಿ ಆ ಒಳ್ಳೇ ದೇಶವನ್ನು ಸ್ವಾಧೀನ ಮಾಡಿಕೊಳ್ಳಿರಿ.
23ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತು ನಿಮ್ಮ ದೇವರಾದ ಕರ್ತನು ಬೇಡವೆಂದು ಕೆತ್ತಿದ ಯಾವ ರೂಪದ ವಿಗ್ರಹ ವನ್ನೂ ಮಾಡಿಕೊಳ್ಳದ ಹಾಗೆ ಜಾಗ್ರತೆಯಾಗಿರ್ರಿ.
24ನಿನ್ನ ದೇವರಾದ ಕರ್ತನು ದಹಿಸುವ ಅಗ್ನಿಯೂ ರೋಷವುಳ್ಳ ದೇವರೂ ಆಗಿದ್ದಾನೆ.
25ನಿನ್ನಿಂದ ಮಕ್ಕಳೂ ಮೊಮ್ಮಕ್ಕಳೂ ಹುಟ್ಟಿದ ಮೇಲೆ ನೀವು ಬಹುಕಾಲ ದೇಶದಲ್ಲಿ ಇದ್ದು ತರುವಾಯ ನಿಮ್ಮನ್ನು ಕೆಡಿಸಿಕೊಂಡು ಯಾವದಾದರ ರೂಪವನ್ನು ಕೆತ್ತಿದ ವಿಗ್ರಹವನ್ನು ಮಾಡಿಕೊಂಡು ನಿನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಆತನಿಗೆ ಕೋಪವನ್ನು ಎಬ್ಬಿಸಿದರೆ
26ನಾನು ಈ ದಿನ ಆಕಾಶ ವನ್ನೂ ಭೂಮಿಯನ್ನೂ ಸಾಕ್ಷಿಗೆ ಕರೆದು ನಿಮಗೆ ಹೇಳುವ ದೇನಂದರೆ--ನೀವು ಯೊರ್ದನನ್ನು ದಾಟಿ ಸ್ವಾಧೀನ ಪಡಿಸಿಕೊಳ್ಳುವ ದೇಶದಲ್ಲಿಂದ ಬೇಗನೆ ಹಾಳಾಗಿ ಹೋಗುವಿರಿ. ನೀವು ಬಹು ದಿವಸ ಇರದೆ ಸಂಪೂರ್ಣ ವಾಗಿ ನಶಿಸುವಿರಿ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ