ಅಪೊಸ್ತಲರ ಕೃತ್ಯಗಳು 25:15

ನಾನು ಯೆರೂಸಲೇಮಿನಲ್ಲಿದ್ದಾಗ ಪ್ರಧಾನಯಾಜಕರೂ ಯೆಹೂದ್ಯರ ಹಿರಿಯರೂ ಅವನ ವಿಷಯವಾಗಿ ನನಗೆ ತಿಳಿಸಿ ಅವನಿಗೆ ವಿರೋಧವಾಗಿ ತೀರ್ಪುಮಾಡ ಬೇಕೆಂದು ನನ್ನನ್ನು ಬೇಡಿಕೊಂಡರು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 25

13ಕೆಲವು ದಿವಸಗಳಾದ ಮೇಲೆ ಅರಸನಾದ ಅಗ್ರಿಪ್ಪನೂ ಬೆರ್ನಿಕೆಯೂ ಫೆಸ್ತನನ್ನು ವಂದಿಸುವದಕ್ಕಾಗಿ ಕೈಸರೈಯಕ್ಕೆ ಬಂದರು.

14ಅಲ್ಲಿ ಅವರು ಅನೇಕ ದಿವಸಗಳು ಇದ್ದ ತರುವಾಯ ಪೌಲನ ವಿಷಯವಾಗಿ ಫೆಸ್ತನು ಅರಸನಿಗೆ--ಫೇಲಿಕ್ಸನು ಬಂಧನಗಳಲ್ಲಿ ಬಿಟ್ಟು ಹೋದ ಒಬ್ಬ ಮನುಷ್ಯನು ಇದ್ದಾನೆ.

15ನಾನು ಯೆರೂಸಲೇಮಿನಲ್ಲಿದ್ದಾಗ ಪ್ರಧಾನಯಾಜಕರೂ ಯೆಹೂದ್ಯರ ಹಿರಿಯರೂ ಅವನ ವಿಷಯವಾಗಿ ನನಗೆ ತಿಳಿಸಿ ಅವನಿಗೆ ವಿರೋಧವಾಗಿ ತೀರ್ಪುಮಾಡ ಬೇಕೆಂದು ನನ್ನನ್ನು ಬೇಡಿಕೊಂಡರು.

16ನಾನು ಅವರಿಗೆ ಪ್ರತ್ಯುತ್ತರವಾಗಿ--ಆ ಆಪಾದಿತನು ತನ್ನ ಮೇಲೆ ಆಪಾದನೆ ಮಾಡುವವರಿಗೆ ಮುಖಾಮುಖಿ ಯಾಗಿ ತನ್ನ ಮೇಲೆ ಹೊರಿಸಲ್ಪಟ್ಟ ಆಪಾದನೆಯ ವಿಷಯದಲ್ಲಿ ತನಗಾಗಿ ಪ್ರತಿವಾದ ಮಾಡುವಂತೆ ಅನುಮತಿ ಪಡೆಯುವ ಮುಂಚೆ ಯಾವ ಮನುಷ್ಯ ನನ್ನೂ ಮರಣಕ್ಕೆ ಒಪ್ಪಿಸುವದು ರೋಮ್‌ನವರ

17ಆದಕಾರಣ ಅವರು ಇಲ್ಲಿಗೆ ಬಂದಾಗ ಯಾವದಕ್ಕೂ ತಡಮಾಡದೆ ಮರುದಿನ ನಾನು ನ್ಯಾಯಾಸನದ ಮೇಲೆ ಕೂತು ಕೊಂಡು ಆ ಮನುಷ್ಯನನ್ನು ತರಬೇಕೆಂದು ಅಪ್ಪಣೆ ಕೊಟ್ಟೆನು.

ಅಪೊಸ್ತಲರ ಕೃತ್ಯಗಳು 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी