ಇವನ ತರುವಾಯ ಇವನ ಸಹೋದರರೊಳಗೆ ಕೆಯಾಲದ ಅರ್ಧಪಾಲಿಗೆ ಅಧಿಪತಿಯಾದ ಹೇನಾದಾದನ ಮಗ ನಾದ ಬವ್ವೈನು ಭದ್ರಪಡಿಸಿದನು.
16ಇವನ ತರುವಾಯ ಬೇತ್ಚೂರಿನ ಅರ್ಧಪಾಲಿಗೆ ಅಧಿಪತಿಯಾದ ಅಜ್ಬೂಕನ ಮಗನಾದ ನೆಹೆವಿಾ ಯನು ದಾವೀದನ ಸಮಾಧಿಗಳಿಗೆ ಎದುರಾಗಿರುವ ಸ್ಥಳದ ಮಟ್ಟಿಗೂ ಅಗೆಯಲ್ಪಟ್ಟ ಕುಂಟೆಯ ಮಟ್ಟಿಗೂ ಪರಾಕ್ರಮಿಗಳ ಮನೆಯ ಮಟ್ಟಿಗೂ ಇರುವದನ್ನು ಭದ್ರಪಡಿಸಿದನು.
17ಇವನ ತರುವಾಯ ಲೇವಿಯರಲ್ಲಿರುವ ಬಾನಿಯ ಮಗನಾದ ರೆಹೂಮನು ಭದ್ರಪಡಿಸಿದನು. ಇವನ ತರುವಾಯ ಕೆಯಾಲದಲ್ಲಿ ಅರ್ಧಪಾಲಿಗೆ ಅಧಿಪತಿ ಯಾದ ಹಷಬ್ಯನು ಭದ್ರಪಡಿಸಿದನು.
18ಇವನ ತರುವಾಯ ಇವನ ಸಹೋದರರೊಳಗೆ ಕೆಯಾಲದ ಅರ್ಧಪಾಲಿಗೆ ಅಧಿಪತಿಯಾದ ಹೇನಾದಾದನ ಮಗ ನಾದ ಬವ್ವೈನು ಭದ್ರಪಡಿಸಿದನು.
19ಇವನ ತರು ವಾಯ ಮಿಚ್ಪದ ಅಧಿಪತಿಯಾದ ಯೇಷೂವನ ಮಗ ನಾದ ಏಜ್ರನು ಮೂಲೆಯಲ್ಲಿ ಆಯುಧ ಶಾಲೆಗೆ ಹೋಗುವ ಸ್ಥಳಕ್ಕೆ ಎದುರಾಗಿ ಮತ್ತೊಂದು ಪಾಲನ್ನು ಭದ್ರಪಡಿಸಿದನು.
20ಇವನ ತರುವಾಯ ಜಕ್ಕೈಯನ ಮಗನಾದ ಬಾರೂಕನು ಆ ಮೂಲೆಯಿಂದ ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆಯ ಬಾಗಲ ವರೆಗೂ ಶ್ರದ್ಧೆಯಿಂದ ಮತ್ತೊಂದು ಪಾಲನ್ನು ಭದ್ರ ಪಡಿಸಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ