೨ ಅರಸುಗಳು 9:31

ಯೇಹುವು ಬಾಗ ಲಲ್ಲಿ ಪ್ರವೇಶಿಸಿದಾಗ ಅವಳು ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾಧಾನವಿತ್ತೋ ಅಂದಳು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 9

29ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಹನ್ನೊಂದನೇ ವರುಷದಲ್ಲಿ ಅಹಜ್ಯನು ಯೆಹೂದದ ಮೇಲೆ ಆಳಲು ಪ್ರಾರಂಭಿಸಿದನು.

30ಯೇಹುವು ಇಜ್ರೇಲಿಗೆ ಬಂದಿದ್ದಾನೆಂದು ಈಜೆ ಬೆಲಳು ಕೇಳಿ ಅವಳು ತನ್ನ ಮುಖಕ್ಕೆ ಬಣ್ಣ ಹಚ್ಚಿ ಕೊಂಡು ತನ್ನ ತಲೆಯನ್ನು ಶೃಂಗರಿಸಿಕೊಂಡು ಕಿಟಕಿ ಯಿಂದ ಇಣಿಕಿ ನೋಡಿದಳು.

31ಯೇಹುವು ಬಾಗ ಲಲ್ಲಿ ಪ್ರವೇಶಿಸಿದಾಗ ಅವಳು ತನ್ನ ಯಜಮಾನನನ್ನು ಕೊಂದ ಜಿಮ್ರಿಗೆ ಸಮಾಧಾನವಿತ್ತೋ ಅಂದಳು.

32ಅವನು ತನ್ನ ಮುಖವನ್ನು ಆ ಕಿಟಕಿಯ ಕಡೆಗೆ ಎತ್ತಿ--ನನ್ನ ಕಡೆ ಇರುವವರು ಯಾರು ಅಂದನು. ಆಗ ಇಬ್ಬರು ಮೂವರು ಕಂಚುಕಿಗಳು ಆ ಕಿಟಕಿ ಯಲ್ಲಿಂದ ಅವನನ್ನು ನೋಡಿದರು.

33ಅವನು-- ಅವಳನ್ನು ಕೆಳಕ್ಕೆ ತಳ್ಳಿಬಿಡಿರಿ ಅಂದನು. ಅವರು ಅವ ಳನ್ನು ಕೆಳಕ್ಕೆ ತಳ್ಳಿಬಿಟ್ಟದ್ದರಿಂದ ಅವಳ ರಕ್ತವು ಗೋಡೆಯ ಮೇಲೆಯೂ ಕುದುರೆಗಳ ಮೇಲೆಯೂ ಚೆಲ್ಲಲ್ಪಟ್ಟಿತು. ಅವನು ಅವಳನ್ನು ತುಳಿಸಿದನು.

೨ ಅರಸುಗಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी