ಕ್ರಿಸ್ತನ ಮಹಿಮೆಯು ಸ್ತುತಿಸಲ್ಪಡುವಂತೆ ಆತನಲ್ಲಿ ನಾವು ಮೊದಲು ನಂಬಿಕೆಯಿಟ್ಟೆವು.
10ಅದೇನಂದರೆ ಕಾಲವು ಪರಿಪೂರ್ಣವಾದ ಯುಗದಲ್ಲಿ ಆತನು ಪರಲೋಕದಲ್ಲಿರುವವುಗಳನ್ನೂ ಭೂ ಲೋಕದಲ್ಲಿರುವವುಗಳನ್ನೂ ಆತನಲ್ಲಿ ಅಂದರೆ ಕ್ರಿಸ್ತನಲ್ಲಿ ಎಲ್ಲವನ್ನು ಒಂದುಗೂಡಿಸಬೇಕೆಂದಿದ್ದನು.
11ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.
12ಕ್ರಿಸ್ತನ ಮಹಿಮೆಯು ಸ್ತುತಿಸಲ್ಪಡುವಂತೆ ಆತನಲ್ಲಿ ನಾವು ಮೊದಲು ನಂಬಿಕೆಯಿಟ್ಟೆವು.
13ನಿಮ್ಮ ರಕ್ಷಣೆಯ ವಿಷಯವಾದ ಸುವಾರ್ತೆಯೆಂಬ ಸತ್ಯ ವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದಿರಿ.
14ಆತನ ಮಹಿಮೆಯ ಸ್ತುತಿಗೋಸ್ಕರ ಕೊಂಡುಕೊಂಡ ಸ್ವಾಸ್ಥ್ಯದವರಿಗೆ ವಿಮೋಚನೆಯಾ ಗುವ ತನಕ ಆತನು (ಪವಿತ್ರಾತ್ಮನು) ನಮ್ಮ ಬಾಧ್ಯತೆಗೆ ಸಂಚಕಾರನಾಗಿದ್ದಾನೆ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ