ದಾನಿಯೇಲನು 12:8

ಆದರೆ ಗ್ರಹಿಸಲಿಲ್ಲ; ಆಗ ನಾನು--ಓ ನನ್ನ ಕರ್ತನೇ, ಈ ಸಂಗತಿಗಳ ಅಂತ್ಯವೇನು ಎಂದು ಕೇಳಿದೆನು.

ಸಂದರ್ಭದೊಂದಿಗೆ ಓದಿ · ದಾನಿಯೇಲನು 12

6ಅವರು ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿದ್ದ ಒಬ್ಬನಿಗೆ ಇನ್ನೊಬ್ಬನು ಹೇಳಿದ್ದೇನಂದರೆ--ಈ ಆಶ್ಚರ್ಯದ ಅಂತ್ಯವು ಎಷ್ಟರ ವರೆಗೆ ಇರುವದು ಎಂದು ಅಂದಾಗ

7ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತವಾಗಿರುವಾತನ ಮೇಲೆ ಆಣೆ ಇಟ್ಟು--ಅದು ಕಾಲ, ಕಾಲಗಳು, ಅರ್ಧಕಾಲ ಇರುವದೆಂದೂ ಆತನು ಪರಿಶುದ್ಧ ಜನರ ಬಲವನ್ನು ಚದರಿಸಿದ ಮೇಲೆ ಇವೆಲ್ಲವುಗಳು ಈಡೇರುವವೆಂದೂ ಅಂದದ್ದನ್ನು ನಾನು ಕೇಳಿದೆನು.

8ಆದರೆ ಗ್ರಹಿಸಲಿಲ್ಲ; ಆಗ ನಾನು--ಓ ನನ್ನ ಕರ್ತನೇ, ಈ ಸಂಗತಿಗಳ ಅಂತ್ಯವೇನು ಎಂದು ಕೇಳಿದೆನು.

9ದಾನಿಯೇಲನೇ, ನಿನ್ನ ದಾರಿಯಲ್ಲಿ ಹೋಗು; ಈ ಮಾತುಗಳು ಅಂತ್ಯಕಾಲದ ವರೆಗೂ ಮುಚ್ಚಲ್ಪಟ್ಟು ಮುದ್ರೆ ಹಾಕಲ್ಪ ಟ್ಟಿವೆ.

10ಅನೇಕರು ಇನ್ನು ಶುದ್ಧಮಾಡಲ್ಪಟ್ಟು, ಶುಭ್ರ ಮಾಡಲ್ಪಟ್ಟು, ಶೋಧಿಸಲ್ಪಟ್ಟಿರುವರು; ಆದರೆ ಕೆಟ್ಟವರು ಕೆಟ್ಟದ್ದನ್ನೇ ಮಾಡುವರು; ಕೆಟ್ಟವರಲ್ಲಿ ಅದನ್ನು ಒಬ್ಬನೂ ಅರ್ಥ ಮಾಡಿಕೊಳ್ಳುವದಿಲ್ಲ; ಆದರೆ ಬುದ್ಧಿವಂತರು ಅರ್ಥ ಮಾಡಿಕೊಳ್ಳುವರು.

ದಾನಿಯೇಲನು 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी